Belagavi NewsBelgaum NewsKannada News

ಬೆಳಗಾವಿಯಲ್ಲಿ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ; ಬೆಳಗಾವಿಯ ಟಿಳಕವಾಡಿ 2ನೇ ಗೇಟ್ ಬಳಿಯ ವರೇರ್ಕರ್ ನಾಟ್ಯ ಮಂದಿರದಲ್ಲಿ ಹವ್ಯಾಸಿ ಛಾಯಾಗ್ರಾಹಕ ಕಿರಣ ಕುಲಕರ್ಣಿ ಅವರ, 3 ದಿನಗಳ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಶುಕ್ರವಾರ ಆರಂಭವಾಯಿತು. ಪ್ರದರ್ಶನವು ಜನವರಿ 14 ಭಾನುವಾರದವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 07.30 ರವರೆಗೆ ತೆರೆದಿರುತ್ತದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಆರ್ ಚವ್ಹಾಣ ಉದ್ಘಾಟಿಸಿದರು. ಗೌರವ ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಕೆ ಕಲ್ಲೋಳಿಕರ್ ಮತ್ತು ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ಅಧ್ಯಕ್ಷ ವಿಜಯ ದರಗಶೆಟ್ಟಿ ಉಪಸ್ಥಿತರಿದ್ದರು.

ಕಾಡು ಪ್ರಾಣಿಗಳ ಬಗ್ಗೆ ಇರುವ ಊಹಾಪೋಹಗಳು ಮತ್ತು ಪ್ರಾಣಿಗಳನ್ನು ಸುರಕ್ಷಿತವಾಗಿ ನೋಡಲು ಕಾಡಿನಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನು ಕಿರಣ ಕುಲಕರ್ಣಿ ವಿವರಿಸಿದರು.

ಮನುಷ್ಯ – ಪ್ರಾಣಿ ಸಂಘರ್ಷದ ಕಾರಣಗಳು ಮತ್ತು ಅದನ್ನು ತಪ್ಪಿಸುವ ಬಗ್ಗೆ ಮಂಜುನಾಥ ಚವ್ಹಾಣ ವಿವರಿಸಿದರು.

Home add -Advt

ಎಸ್ ಕೆ ಕಲ್ಲೋಳಿಕರ್ ಅವರು ಅರಣ್ಯ ಮತ್ತು ವನ್ಯಜೀವಿಗಳನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ವಿವರಿಸಿದರು.

ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್ ಅಧ್ಯಕ್ಷ ವಿಜಯ ದರಗಶೆಟ್ಟಿ, ದೇಣಿಗೆ ನೀಡಿದ ಮೊತ್ತವನ್ನು  ಕ್ಲಬ್ ಹೇಗೆ ಬಳಸಿಕೊಳ್ಳುತ್ತಿದೆ ಎಂದು ವಿವರಿಸಿದರು.

85 ವನ್ಯಜೀವಿ ಫೋಟೋಗಳನ್ನು ಪ್ರದರ್ಶಿಸಲಾಗಿದೆ. ಶನಿವಾರ ಹಾಗೂ ಭಾನುವಾರ ನೂರಾರು ಜನರು ಆಗಮಿಸಿ ಫೋಟೋಗಳನ್ನು ವೀಕ್ಷಿಸಿ, ಪ್ರಶಂಸೆ ವ್ಯಕ್ತಪಡಿಸಿದರು.

ಮಾರಾಟವಾಗಿ ಬಂದ ಹಣವನ್ನು ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್‌ಗೆ ಚಾರಿಟಿಗಾಗಿ ನೀಡಲಾಗುವುದು ಎಂದು ಕಿರಣ ಕುಲಕರ್ಣಿ ತಿಳಿಸಿದರು.

Related Articles

Back to top button