ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜನವರಿ 12ರಿಂದ ಕಿರಣ ಕುಲ್ಕರ್ಣಿ ಅವರ ವನ್ಯಜೀವಿ ಛಾಯಾಗ್ರಹಣ ಪ್ರದರ್ಶನ ಬೆಳಗಾವಿಯಲ್ಲಿ ನಡೆಯಲಿದೆ.
ಕಿರಣ ಕುಲಕರ್ಣಿ ಇವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿಯವರು. ಅವರು ನವದೆಹಲಿಯ DCM ಶ್ರಿರಾಮ್ ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿದ್ದಾರೆ.
ಕರ್ನಾಟಕದ ಮಾಜಿ ಮಂತ್ರಿಗಳೂ ಹಾಗೂ ಅಂದಿನ ಖ್ಯಾತ ವನ್ಯಜೀವಿ ಛಾಯಾಗ್ರಾಹಕರಾಗಿದ್ದ ಶ್ರೀ ಎಮ್.ವಾಯ್ .ಘೋರ್ಪಡೆಯವರಿಂದ ಪ್ರಭಾವಿತರಾಗಿ ನಂತರ ಜಗದ್ವಿಖ್ಯಾತ ವನ್ಯಜೀವಿ ಛಾಯಾಚಿತ್ರಕಾರರಾಗಿರುವ ಸುಧೀರ್ಶಿವರಾಮ್ ಇವರ ಮಾರ್ಗದರ್ಶನದಲ್ಲಿ ತಮ್ಮ ಹವ್ಯಾಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
ವನ್ಯಜೀವಿ ಛಾಯಾಗ್ರಹಣದಲ್ಲಿ ಇವರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯದಲ್ಲಿ ವಿವಿಧ ಹಂತಗಳಲ್ಲಿ ಮನ್ನಣೆಯನ್ನು ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ರಾಯಭಾರಿ ಕಚೇರಿಯಲ್ಲಿ ಇವರ ಛಾಯಾಚಿತ್ರಗಳು ಪ್ರದರ್ಶನಕ್ಕೆ ಇಟ್ಟದ್ದೇ ಇದಕ್ಕೆ ಸಾಕ್ಷಿ.
ಜೀವನದಲ್ಲಿ ಗುರಿ ಸಾಧಿಸಲು ಒಂದು ಸದುದ್ದೇಶದ ಹವ್ಯಾಸ ಹೇಗೆ ಸಹಾಯ ಮಾಡಬಲ್ಲದು ಎಂಬುದನ್ನು ತಮ್ಮ ವನ್ಯಜೀವಿ ಛಾಯಾಚಿತ್ರಗಳ ಮೂಲಕ ಬೇರೆ ಬೇರೆ ಶಾಲೆ ಕಾಲೇಜುಗಳ ವಿದ್ಯಾರ್ಥಿಗಳಿಗೆ , NCC ವಿದ್ಯಾರ್ಥಿಗಳಿಗೆ ಅತಿಥಿ ಅಧ್ಯಾಪಕರಾಗಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಅವರು ಭಾರತ ಮತ್ತು ವಿದೇಶಗಳಲ್ಲಿನ ಹೆಚ್ಚಿನ ವನ್ಯಜೀವಿ ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನವನಗಳು ಮತ್ತು ಪಕ್ಷಿಧಾಮಗಳನ್ನು ಸಂದರ್ಶಿಸಿದ್ದಾರೆ.
ಜನವರಿ 12 ರಿಂದ 14 ರವರೆಗೆ 60 + ಏಕವ್ಯಕ್ತಿ ವನ್ಯಜೀವಿ ಛಾಯಾಚಿತ್ರಗಳನ್ನು ಬೆಳಗಾವಿಯ ಟಿಳಕವಾಡಿಯ 2 ನೇ ಗೇಟ್ ಬಳಿಯ ವರೇರ್ಕರ್ನಾಟ್ಯಮಂದಿರದಲ್ಲಿ ಪ್ರದರ್ಶಿಸಲಾಗುತ್ತಿದೆ. ಪ್ರದರ್ಶನವು ಬೆಳಿಗ್ಗೆ 10.30 ರಿಂದ ಸಂಜೆ 07.30 ರವರೆಗೆ ತೆರೆದಿರುತ್ತದೆ.
ಮಾರಾಟ ಪ್ರಕ್ರಿಯೆಗಳನ್ನು ರೋಟರಿ ಕ್ಲಬ್ ಆಫ್ ಬೆಳಗಾವಿ ಸೌತ್‌ಗೆ ಚಾರಿಟಿಗಾಗಿ ನೀಡಲಾಗುವುದು.
ಜನವರಿ 12 ರಂದು ಬೆಳಿಗ್ಗೆ 11.30 ಕ್ಕೆ ಬೆಳಗಾವಿಯ ಮುಖ್ಯಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಆರ್ ಚವ್ಹಾಣ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ.
ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಎಸ್ ಕಲ್ಲೊಳ್ಳಿಕರ ಗೌರವ ಅತಿಥಿಯಾಗಿ ಆಗಮಿಸಲಿದ್ದಾರೆ. ರೋಟರಿ ಕ್ಲಬ್ ಆಫ್ ಬೆಳಗಾವಿಸೌತ್ ನ ಅಧ್ಯಕ್ಷ ವಿಜಯ ದರಗಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ