Kannada NewsKarnataka News

ಕಾಂಗ್ರೆಸ್ ಪ್ರಭಾವಿ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ಬಿಜೆಪಿಗೆ?

 

 

ಎಂ.ಕೆ.ಹೆಗಡೆ, ಬೆಳಗಾವಿ – ( [email protected] ) –

ಇದೊಂದು ಶಾಕಿಂಗ್ ನ್ಯೂಸ್!

ಕಾಂಗ್ರೆಸ್ ಪ್ರಭಾವಿ ನಾಯಕಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬಿಜೆಪಿ ಸೇರಲಿದ್ದಾರೆಯೆ?

ಪ್ರಗತಿವಾಹಿನಿ ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಲಕ್ಷ್ಮಿ ಹೆಬ್ಬಾಳಕರ್ ಕೂಡ ಬಿಜೆಪಿ ಸೇರುವವರ ಪಟ್ಟಿಯಲ್ಲಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ಈಗಾಗಲೆ ಬಿಜೆಪಿ ನಾಯಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನುತ್ತವೆ ಬಿಜೆಪಿ ಮೂಲಗಳು.

ಭಾನುವಾರ ಸಂಜೆಯ ಹೊತ್ತಿಗೆ ಹೆಬ್ಬಾಳಕರ್ ಕಾಂಗ್ರೆಸ್ ಗೆ ರಾಜಿನಾಮೆ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಲಕ್ಷ್ಮಿ ಹೆಬ್ಬಾಳಕರ್ ಕಾಂಗ್ರೆಸ್ ಬಿಟ್ಟು ಹೋಗಬಹುದೆಂದು ಕಾಂಗ್ರೆಸ್ ನ ಯಾವ ನಾಯಕರೂ ಯೋಚಿಸಿರಲಿಕ್ಕಿಲ್ಲ. ಮುಖ್ಯಮಂತ್ರಿಗಳೂ ಈ ಬಗ್ಗೆ ಯೋಚಿಸಲು ಸಾಧ್ಯವಿಲ್ಲ.

 

ಹೆಬ್ಬಾಳಕರ್ ಅಸಮಾಧಾನ ಏನು?:

ಲಕ್ಷ್ಮಿ ಹೆಬ್ಬಾಳಕರ್ ಕಾಂಗ್ರೆಸ್ ಪ್ರಭಾವಿ ನಾಯಕಿ. ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೂಡ ಕೆಲಸ ಮಾಡಿದ್ದಾರೆ. ಸಧ್ಯ ಮೈಸೂರು ಮಿನರಲ್ಸ್ ಚೇರಮನ್ ಕೂಡ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆ ನೇರ ಸಂಪರ್ಕ ಹೊಂದಿದ್ದಾರೆ.

ಆದರೆ ಅನೇಕ ವಿಷಯಗಳಲ್ಲಿ ಕಾಂಗ್ರೆಸ್ ನ ರಾಜ್ಯ ನಾಯಕರು ತಮಗೆ ಸಹಕಾರ ನೀಡುತ್ತಿಲ್ಲ ಎನ್ನುವ ಅಸಮಾಧಾನ ಲಕ್ಷ್ಮಿ ಹೆಬ್ಬಾಳಕರ್ ಅವರಲ್ಲಿದೆ. ಕೆಲವು ಸಮಸ್ಯೆಗಳು ಬಂದಾಗ ನೆರವು ಯಾಚಿಸಿದರೆ ಯಾವೊಬ್ಬ ನಾಯಕನೂ ತಮ್ಮ ನೆರವಿಗೆ ಬರುತ್ತಿಲ್ಲ. ತಮ್ಮ ಸ್ವಂತ ಶಕ್ತಿಯಿಂದಲೇ ಎಲ್ಲವನ್ನೂ ಎದುರಿಸಬೇಕಾಗಿದೆ ಎನ್ನುವ ಆಕ್ರೋಶ ಅವರಲ್ಲಿದೆ.

ಅವರು ಯಾವುದೇ ಕಾರಣದಿಂದ ಪಕ್ಷ ಬಿಡುವುದಿಲ್ಲ ಎನ್ನುವ ನಂಬಿಕೆಯಿಂದಲೇ ಪಕ್ಷದಲ್ಲಿ ಅವರನ್ನು ಇನ್ನಷ್ಟು ಕಡೆಗಣಿಸಲಾಗುತ್ತಿರಬಹುದು. ಅಂದರೆ ಪಕ್ಷಕ್ಕೆ ನಿಷ್ಟರಾಗಿದ್ದರೆ ಇಲ್ಲಿ ಬೆಲೆ ಇಲ್ಲ ಎನ್ನುವ ಭಾವನೆ ಸಹಜವಾಗಿ ಶಾಸಕರಲ್ಲಿ ಮೂಡುವಂತೆ ನಾಯಕರು ವರ್ತಿಸುತ್ತಿರುವುದು ಲಕ್ಷ್ಮಿ ಹೆಬ್ಬಾಳಕರ್ ಅವರಿಗೂ ಬೇಸರ ತರಿಸಿರಬಹುದು.

ಲಕ್ಷ್ಮಿ ಹೆಬ್ಬಾಳಕರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಸಂಜಯ ಪಾಟೀಲ ವಿರುದ್ಧ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

ಪಕ್ಷದ ಪ್ರಭಾವಕ್ಕಿಂತ ಸ್ವಂತ ಶಕ್ತಿಯಿಂದಲೇ ಆಯ್ಕೆಯಾದವರು ಅವರು. ಗ್ರಾಮೀಣ ಕ್ಷೇತ್ರಾದ್ಯಂತ ಮನೆಮಗಳು ಎನಿಸಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ, ಮತ್ತು ಶಾಸಕರಾಗುವುದಕ್ಕೂ ಮುನ್ನ ಕೂಡ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನೂ ಮಾಡಿಸಿದ್ದಾರೆ.

ಆದರೆ ಕಾಂಗ್ರೆಸ್ ನಾಯಕರು ಅವರನ್ನು ಕಡಗಣಿಸುತ್ತಿರುವುದೇ ಅವರ ಚಿತ್ತ ಬಿಜೆಪಿಯತ್ತ ವಾಲಲು ಕಾರಣ ಎನ್ನಲಾಗಿದೆ.

ಭಾನುವಾರ ಸಂಜೆಯೊಳಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಗೊತ್ತಾಗಬಹುದು. ಒಂದೊಮ್ಮೆ ಇದು ನಿಜವಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವುದಂತೂ ನಿಜ.

22ಕ್ಕೆ ತಲುಪಲಿದೆಯೇ?: 

ಕಾಂಗ್ರೆಸ್ ಪಕ್ಷಕ್ಕೆ ಒಟ್ಟೂ 22 ಶಾಸಕರು ರಾಜಿನಾಮೆ ನೀಡುವ ಸಾಧ್ಯತೆ ಇದೆ ಎಂದು ಮೊದಲ ಹಂತದಲ್ಲಿ 12 ಜನ ರಾಜಿನಾಮೆ ನೀಡಿದಾಗಲೇ ಪ್ರಗತಿವಾಹಿನಿ ಪ್ರಕಟಿಸಿತ್ತು. ಈಗ ಅದು ನಿಜವಾಗುವ ಕಾಲ ಸನ್ನಿಹಿತವಾಗಿದೆ.

ಸ್ಪೀಕರ್ ರಾಜಿನಾಮೆ ಸ್ವೀಕರಿಸಲು ವಿಳಂಬ ಧೊರಣೆ ಅನುಸರಿಸುತ್ತಿರುವುದರಿಂದ ಕೆಲವರು ರಾಜಿನಾಮೆ ನೀಡಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.

 

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೂ ಶೇರ್ ಮಾಡಿ. ಹೆಚ್ಚಿನ ಸುದ್ದಿಗಳಿಗಾಗಿ http//:pragativahini.com ನೋಡಿ)

ಇದನ್ನೂ ಓದಿ –

22ಕ್ಕೇರಲಿದೆಯೇ ರಾಜಿನಾಮೆ ಶಾಸಕರ ಸಂಖ್ಯೆ?

ಎಸ್ ಟಿಪಿ ವಿವಾದ: 2 ದಿನ ಗಡುವು ನೀಡಿದ ಲಕ್ಷ್ಮಿ ಹೆಬ್ಬಾಳಕರ್

ಗ್ರಾಮೀಣ ಶಾಸಕಿಯಾಗಿದ್ದಕ್ಕೆ ಸಾರ್ಥಕತೆ ಕಂಡೆ -ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ ಗ್ರಾಮೀಣ ಕ್ಷೇತ್ರದ 62 ಕೆರೆಗಳಿಗೆ ನೀರು ತುಂಬಿಸಲು 380 ಕೋಟಿ ರೂ. -ಲಕ್ಷ್ಮಿ ಹೆಬ್ಬಾಳಕರ್ ಸಾಧನೆ

ಮೈಸೂರು ಮಿನರಲ್ಸ್ ಅಧ್ಯಕ್ಷರಾಗಿ ಲಕ್ಷ್ಮಿ ಹೆಬ್ಬಾಳಕರ್ ಅಧಿಕಾರ ಸ್ವೀಕಾರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button