Kannada NewsKarnataka NewsLatest

2 -3 ದಿನದಲ್ಲಿ ಮುಖ್ಯಮಂತ್ರಿ ಬಳಿ ಪಾಲಿಕೆ ಸದಸ್ಯರ ಪರೇಡ್ – ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಭರ್ಜರಿ ಜಯಗಳಿಸಿರುವ ಭಾರತೀಯ ಜನತಾ ಪಾರ್ಟಿ ಮೇಯರ್ ಆಯ್ಕೆಗೂ ಮುನ್ನ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಮುಂದಾಗಿದೆ.

ಪಾಲಿಕೆ ನೂತನ ಸದಸ್ಯರ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕರೆದೊಯ್ದು ಬೆಳಗಾವಿ ಅಭಿವೃದ್ಧಿಗೆ ಸಹಕಾರ ಕೋರಲಾಗುವುದು ಎಂದು ಚುನಾವಣೆ ಉಸ್ತುವಾರಿ ವಹಿಸಿದ್ದ ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ.

Home add -Advt

ಫಲಿತಾಂಶ ನಮ್ಮ ನಿರೀಕ್ಷೆಯಂತೆಯೇ ಬಂದಿದೆ. ಬಿಜೆಪಿ ಸಾಧನೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಎಲ್ಲ ಮುಖಂಡರೊಂದಿಗೆ ಚರ್ಚಿಸಿ ನಂತರ ಮುಖ್ಯಮಂತ್ರಿಗಳ ಸಮಯ ಪಡೆದು ಬಹುತೇಕ ಗುರುವಾರ ಬೆಂಗಳೂರಿಗೆ ತೆರಳಲಾಗುವುದು ಎಂದು ಅಭಯ ಪಾಟೀಲ ಹೇಳಿದ್ದಾರೆ.

ಬಿಜೆಪಿ ಬೆಳಗಾವಿ ಪಾಲಿಕೆಯ 36ಕ್ಕಿಂತ ಹೆಚ್ಚಿನ ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆದಿದೆ.

 

ಬೆಳಗಾವಿಯಲ್ಲಿ ಲಾಠಿ ಚಾರ್ಜ್; ಪಾಲಿಕೆ ಚುನಾವಣೆಯಲ್ಲಿ ಇತಿಹಾಸ ಸೃಷ್ಟಿಸಿದ ಬಿಜೆಪಿ

Related Articles

Back to top button