ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶುಕ್ರವಾರ ಸುಳೇಬಾವಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಆಯೋಜಿಸಿರುವ ಸಮಾವೇಶಕ್ಕೆ ನಾನು ಹೋಗುವುದಿಲ್ಲ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷರೂ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯೂ ಆಗಿರುವ ಮಾಜಿ ಶಾಸಕ ಸಂಜಯ ಪಾಟೀಲ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಮತಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಅವರು ಸಮಾವೇಶ ಮಾಡುತ್ತಿದ್ದು, ಅವರ ಅಭಿಮಾನಗಳ ಆಯೋಜಿಸಿದ್ದಾರೆ. ಅದು ಬಿಜೆಪಿ ಕಾರ್ಯಕ್ರಮ ಅಲ್ಲ. ನಾನು ಹೋಗುವುದಿಲ್ಲ. ನಾನು ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಬೇರೆ ಬ್ಯಾನರ್ ನಲ್ಲಿ ನಡೆಯುವ ಸಮಾವೇಶಕ್ಕೆ ಹೋಗುವುದಿಲ್ಲ ಎಂದರು.
ಇದರಿಂದಾಗಿ ಬಿಜೆಪಿಗೂ ಈ ಸಮಾವೇಶಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಆದರೆ ರಮೇಶ ಜಾರಕಿಹೊಳಿ ತಳಮಟ್ಟದಿಂದ ಬಿಜೆಪಿ ಸಂಘಟಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದಿದ್ದರು. ತಮ್ಮ ಅಭಿಮಾನಿಗಳು ಈ ಸಮಾವೇಶ ಸಂಘಟಿಸಿದ್ದಾರೆ ಎಂದೂ ಅವರು ಹೇಳಿದ್ದರು.
ಚುನಾವಣೆ ಬಂದಾಗ ಕ್ಷೇತ್ರದ ಜನರಿಗೆ ಆಕಾಂಕ್ಷಿಗಳು ಆಮಿಷ ತೋರಿಸುವುದು ಸ್ವಾಭಾವಿಕ. ಇದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಜೋರು ನಡೆಯುತ್ತಿದೆ. ಈ ಬೆಳವಣಿಗೆ ಸರಿಯಲ್ಲ. ಯಾವ ಪಕ್ಷದವರೂ ಇಂಥ ಕೆಲಸ ಮಾಡಬಾರದು. ಅಭಿವೃದ್ಧಿ ಮಾಡಿದ್ದರೆ, ಉಡುಗೊರೆ ಕೊಡುವ ಅವಶ್ಯಕತೆ ಏನಿದೆ ಎಂದು ಸಂಜ ಪಾಟೀಲ ಪ್ರಶ್ನಿಸಿದರು.
ವಿಪರ್ಯಾಸವೆಂದರೆ ಕಾಂಗ್ರೆಸ್ ನವರು ಕೊಟ್ಟಿದ್ದಕ್ಕಿಂತ ಡಬಲ್ ನಾನು ಕೊಡುತ್ತೇನೆ ಎಂದು ಸಂಜಯ ಪಾಟೀಲ ಕಳೆದ ವಾರವಷ್ಟೆ ತಮ್ಮ ಹುಟ್ಟು ಹಬ್ಬದ ನೆಪದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಬಹಿರಂಗ ಹೇಳಿಕೆ ನೀಡಿದ್ದರು.
ಬಿಜೆಪಿಯಿಂದ ಗ್ರಾಮೀಣ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಧನಂಜಯ ಜಾಧವ, ನಾಗೇಶ ಮನ್ನೋಳಕರ ಅವರಿಗೆ ಟಿಕೆಟ್ ನೀಡಿದರೆ ಅವರಿಗೆ ಬೆಂಬಲಿಸುತ್ತೇನೆ. ನನಗೆ ಸಿಕ್ಕರೆ ಅವರು ನನಗೆ ಬೆಂಬಲಿಸುತ್ತಾರೆ. ಈ ಬಾರಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ನಿಶ್ಚಿತ ಎಂದರು.
ಮಾಧ್ಯಮದವರೊಂದಿಗೆ ಸಂಜಯ ಪಾಟೀಲ ದಾದಾಗಿರಿ… ಗೂಂಡಾಗಿರಿ; ಕ್ಷಮೆಯಾಚನೆಯೊಂದಿಗೆ ಕ್ಲೈಮ್ಯಾಕ್ಸ್
https://pragati.taskdun.com/sanjay-patil-spat-with-media-climax-with-an-apology/
https://pragati.taskdun.com/what-is-the-reason-why-sanjay-patil-is-so-disturbed/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ