*ಕೇಂದ್ರ ಸೇವೆಗೆ ಆಯ್ಕೆಯಾದ ಪ್ರಣವ್ ಮೊಹಂತಿ: ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ದೇಶದಲ್ಲಿ ಸಂಚಲನ ಸೃಷ್ಟಿಸಿರುವ ಧರ್ಮಸ್ಥಳ ಪ್ರಕರಣದಲ್ಲಿ ಉತ್ಖನನ ನಡೆಸಲಾಗುತ್ತಿದೆ. ಅನಾಮಿಕ ವ್ಯಕ್ತಿ ಗುರುತಿಸಿರುವ ಸ್ಥಳಗಳಲ್ಲಿ ಶವಗಳ ಹುಡುಕಾಟ ನಡೆಸಲಾಗಿದೆ. ಈ ಪ್ರಕರಣದ ಬಗ್ಗೆ ಎಸ್‌ಐಟಿ ತಂಡ ವರದಿ ಕೊಡುವರೆಗೆ ನಾವು ಏನನ್ನು ಮಾತಾಡಲ್ಲ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ತನಿಖೆ ನಡೆಯುವಾಗ ನಾವು ಮಾತಾಡೋದು ಸಮಂಜಸ ಅಲ್ಲ ಎಂದರು. ಅಲ್ಲದೇ ಸಮಾಜದಲ್ಲಿ ಭಾವನೆಗಳಿಗೆ ಧಕ್ಕೆ ಯಾಗುವ ಫೋಸ್ಟ್ ಹಾಕಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ನಾವು ಅವೆಲ್ಲವನ್ನೂ ವಾಚ್ ಮಾಡುತ್ತಿದ್ದೇವೆ, ಅದರಿಂದ ಸಮಾಜದಲ್ಲಿ ಭಾವನೆಗಳ ಸೃಷ್ಟಿಯಾದ್ರೆ ನಿಲ್ಲಿಸು ಪ್ರಯತ್ನ ಮಾಡುತ್ತೇವೆ, ನಮ್ಮಲ್ಲಿ ಹೇಟ್ ಸ್ಪೀಚ್ ಮಾಡುವವರಿಗೆ ಕಾನೂನು ಮಾಡಿದ್ದೇವೆ, ಈಗಾಗಲೇ ಕ್ರಮ ಕೈಗೊಳ್ಳುತ್ತಿದ್ದೇವೆ.
ಈ ರೀತಿ ಪೋಸ್ಟ್ ಮಾಡುವುದನ್ನು ಗಮನಿಸುತ್ತೇವೆ, ಯಾವದೋ ಕಮ್ಯುನಲ್ ಪೋಸ್ಟ್ ಮಾಡಿದ್ರೆ, ಕ್ರಮ ಕೈಗೊಳ್ಳುತ್ತೇವೆ ಈ ಹಿಂದೆಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಗ್ತಿತ್ತು, ಆಗ ವಾರ್ನಿಂಗ್ ಕೊಟ್ಟು ಕ್ರಮ ಕೈಗೊಂಡಿದ್ವಿ, ಈಗ ಅದೆಲ್ಲ ಕಡಿಮೆಯಾಗಿದೆ, ಈ ಘಟನೆ ಬಗ್ಗೆ ಪೋಸ್ಟ್ ಹಾಕಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಆಯ್ಕೆಯಾಗಿದ್ದಾರೆ. ಈಗ ಇದ್ದಾರೆ, ಹೊರಗಡೆ ಹೋಗುವ ಪ್ರಶ್ನೆ ಇಲ್ಲ. ಕೇಂದ್ರ ಸರ್ಕಾರ ನಮಗೆ ಪತ್ರ ಬರೆಯಬೇಕು ಆಗ ನಾವು ಕಳುಹಿಸುತ್ತೇವೋ? ಬಿಡ್ತಿವೋ ನಮಗೆ ಬಿಟ್ಟ ವಿಚಾರ. ಸದ್ಯಕ್ಕೆ ಸೆಲೆಕ್ಟ್ ಆಗಿದ್ದಾರೆ ಅಷ್ಟೇ.ಮುಂದೆ ನೋಡೋಣ ಎಂದರು.