*ವೈನ್ ಮರ್ಚೆಟ್ಸ್ ಅಸೋಸಿಯೇಶನ್ ಲಿಕ್ಕರ್ ಮಾರಾಟ ಬಂದ್ ಗೆ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ ವಿರೋಧ*
ಪ್ರಗತಿವಾಹಿನಿ ಸುದ್ದಿ: ವೈನ್ ಮರ್ಚೆಂಟ್ ಅಸೋಸಿಯೇಶನ್ ಇದೇ 20 ರಂದು ಕರೆ ನೀಡಿರುವ ಲಿಕ್ಕರ್ ಮಾರಾಟ ಬಂದ್ ಗೆ ನಮ್ಮ ವಿರೋಧವಿದೆ ಎಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ ತಿಳಿಸಿದೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಉಮೇಶ್ ಬಾಳಿ, ಪ್ರಧಾನ ಕಾರ್ಯದರ್ಶಿ ಗೋವಿಂದ. ದು.ಕೌಲಗಿ, ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ಇದುವರೆಗೂ ನಮ್ಮನ್ನು ಭೇಟಿಯಾಗಿಲ್ಲ, ಬಂದ್ ಕುರಿತು ಮಾತನಾಡಿಲ್ಲ, ಬಂದ್ ನಿಂದ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಲಿದೆ, 2016ರಲ್ಲೇ ನಮ್ಮ ಸಂಘ ನೊಂದಣಿಯಾಗಿದೆ ಎಂದು ಹೇಳಿದರು.
ಪ್ರವಾಸದ್ಯೋಮ ಹಾಗೂ ಅಬಕಾರಿ ಇಲಾಖೆಯಿಂದ ಅನುಮತಿ ಪಡೆದು ಎರಡು ಸಾವಿರಕ್ಕಿಂತ ಅಧಿಕ ಹೋಟೆಲ್ ಗಳು ಕಾರ್ಯನಿರ್ವಹಿಸುತ್ತಿವೆ, ಪ್ರವಾಸೋದ್ಯಮದ ಅಡಿಯಲ್ಲಿ ನಡೆಯುತ್ತಿರುವ ಹೋಟೆಲ್, ಬಾರ್ ಗಳು ಹೆಚ್ಚಿನ ಪ್ರಮಾಣದ ಲೈಸನ್ಸ್ ಭರಿಸುತ್ತಿದ್ದು,ವಾರ್ಷಿಕ ಶುಲ್ಕವನ್ನು ಕಡಿಮೆ ಮಾಡಿ ಲಾಭಾಂಶವನ್ನು ಶೇ 10ರಿಂದ 20ರಷ್ಟು ಹೆಚ್ಚಿಸ ಬೇಕು, ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರು ಮದ್ಯ ಸೇವನೆ ಹಾಗೂ ಊಟೋಪಚಾರ ಮಾಡಲು ದಿನದ 24ಗಂಟೆ ಸೇವೆಗೆ ಅವಕಾಶ ನೀಡಬೇಕು, ಜಿಎಸ್ ಟಿ, ಆಸ್ತಿ ತೆರಿಗೆ, ಇತರೆ ತೆರಿಗೆಯಲ್ಲಿ ರಿಯಾಯಿತಿ ನೀಡಬೇಕು ಎಂದು ಹೇಳಿದರು.
ಅಬಕಾರಿ ಇಲಾಖೆಯ ಸಿ,ಎಲ್ 2 ಅಂಗಡಿಗಳಲ್ಲಿ ಮದ್ಯ ಸೇವನೆಗೆ ಅವಕಾಶ ಮತ್ತು ಗ್ರಾಮೀಣ ಪ್ರದೇಶ ಮತ್ತು ಡಾಬಾಗಳಲ್ಲಿ ಯಥೇಚ್ಚಚಾಗಿ ಮಧ್ಯ ಮಾರಾಟಕ್ಕೆ ಅವಕಾಶ ನೀಡುತ್ತಿರುವುದರಿಂದ ಪ್ರವಾಸಿ ಹೋಟೆಲ್, ಬಾರ್ ಗಳಿಗೆ ಬಾರೀ ತೊಂದರೆಯಾಗಿದೆ, ಸಿ.ಎಲ್ 9 ಸನ್ನದುದಾರರಿಗೆ ಎಂ.ಆರ್.ಪಿ ದರದಲ್ಲಿ ಮಾರಾಟಕ್ಕೆ ಅವಕಾಶ ನೀಡಿರುವುದರಿಂದ, ಸಿ.ಎಲ್ 7, ಸಿಎಲ್ 8, ಸಿಎಲ್ 4 ಸನ್ನದುದಾರರಿಗೆ ಮದ್ಯ ಮಾರಾಟ ಮಾಡಲು ತೊಂದರೆಯಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ