Karnataka News

*ರೈಲಿನಲ್ಲಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದ ಯುವತಿ ಮೇಲೆ ರೈಲಿನಲ್ಲಿಯೇ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಆರೋಪಿ ಮೊಹಮ್ಮದ್ ಶುರೈಮ್ (22) ಎಂಬಾತನನ್ನು ಉಡುಪಿ ರೈಲ್ವೆ ಪೊಲಿಸರು ಬಂಧಿಸಿದ್ದಾರೆ.

Home add -Advt

ಮಣಿಪಾಲ ಮೂಲದ ಯುವತಿ ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಕೃಷ್ಣ ಜನ್ಮಾಷ್ಟಮಿಗಾಗಿ ರಜೆ ಪಡೆದು ಊರಿಗೆ ಹೊರಟಿದ್ದರು. ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲಿನಲ್ಲಿ ಹಡಹಗಲೇ ಯುವತಿ ಮೇಲೆ ಮಾನಭಂಗಕ್ಕೆ ಕಾಮುಕ ಯತ್ನಿಸಿದ್ದಾನೆ. ಯುವತಿ ಆಕ್ಷೇಪ ವ್ಯಕ್ತಪಡಿಸಿ ಕಿರುಚುತ್ತಿದ್ದಂತೆ ಯುವಕ ಕ್ಷಮೆ ಕೇಳಿದ್ದು, ಭಟ್ಕಳದಲ್ಲಿ ಇಳಿದು ಹೋಗಿದ್ದಾನೆ.

ತಕ್ಷಣ ಯುವತಿ ರೈಲ್ವೆ ಮದತ್ ಆಪ್ ಮೂಲಕ ಉಡುಪಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಉಡುಪಿ ತಲುಪುತ್ತಿದ್ದಂತೆ ಯುವತಿ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮೂರು ಹಂತಗಳಲ್ಲಿ ಪ್ರಯಾಣಿಕರ ಶಾರ್ಟ್ ಲಿಸ್ಟ್ ರೆಡಿ ಮಾಡಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಜಾಡು ಹಿಡಿದು ಭಟ್ಕಳದ ಮನೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Related Articles

Back to top button