Latest

ಪೆಟ್ರೋಲ್ ಆಯ್ತು, ಡಿಸೆಲ್ ದರವೂ ಶತಕದ ಸನಿಹ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ದೇಶದಲ್ಲಿ ಪೆಟ್ರೋಲ್, ಡಿಸೆಲ್ ದರದ ಓಟ ಇನ್ನೂ ಮುಂದುವರಿದಿದೆ. ಇಂದು ಕೂಡ ಪೆಟ್ರೋಲ್ ಗೆ 35 ಪೈಸ್ ಹಾಗೂ ಡಿಸೆಲ್ ಗೆ 28 ಪೈಸೆ ಹೆಚ್ಚಾಗಿದೆ. ಇದರಿಂದಾಗಿ ಈಗಾಗಲೆ ಶತಕ ದಾಟಿರುವ ಪೆಟ್ರೋಲ್ ದರದ ಜೊತೆಗೆ ಡಿಸೆಲ್ ದರ ಕೂಡ ಶತಕದ ಸನಿಹ ಬಂದಿದೆ.

ಕಳೆದ ಹಲವು ತಿಂಗಳಿನಿಂದ ಸತತವಾಗಿ ಪೆಟ್ರೋಲ್, ಡಿಸೆಲ್ ದರ ಏರುತ್ತಲೇ ಸಾಗಿದೆ. ಪೆಟ್ರೋಲ್ ದರ ದೇಶದ ಎಲ್ಲ ನಗರಗಳಲ್ಲೂ ಶತಕ ದಾಟಿದೆ. ಇದೀಗ ಡಿಸೆಲ್ ದರ ಕೂಡ ಅನೇಕ ನಗರಗಳಲ್ಲಿ ಶತಕದತ್ತ ಸಾಗಿದೆ. ಮುಂಬೈಯಲ್ಲಿ ಪೆಟ್ರೋಲ್ ದರ 104.70 ರೂ ಹಾಗೂ ಡೆಸೆಲ್ ದರ 96.90 ರೂ. ಆಗಿದೆ.

ಪೆಟ್ರೋಲ್, ಡಿಸೆಲ್ ದರ ಏರಿಕೆ ವಿರುದ್ಧ ಕಾಂಗ್ರೆಸ್ ಪಕ್ಷ ಎಲ್ಲೆಡೆ ಪ್ರತಿಭಟನೆ ನಡೆಸಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಪೆಟ್ರೋಲ್, ಡಿಸೆಲ್ ಜೊತೆಗೆ ಇನ್ನಿತರ ಅವಶ್ಯಕ ವಸ್ತುಗಳ ದರವೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಅನ್ ಲಾಕ್ 3.O ಗೆ ರಾಜ್ಯ ಸರಕಾರ ಸಿದ್ಧತೆ

Home add -Advt

ಸಿ.ಪಿ.ಯೋಗೀಶ್ವರ ಕಾಯೋಣ ಕಾಯೋಣ ಎಂದಿದ್ದೇಕೆ? ಯತ್ನಾಳ ಭೇಟಿಯ ರಹಸ್ಯವೇನು?

Related Articles

Back to top button