ಊಟ ಮಾಡಿಸುವಾಗ ಮಗುವಿನ ದುರಂತ ಸಾವು

ಪ್ರಗತಿವಾಹಿನಿ ಸುದ್ದಿ, ಹಾವೇರಿ – ಮಕ್ಕಳು ಊಟು ಮಾಡುವುದಿಲ್ಲ ಎಂದು ಏನೇನೋ ಆಟ ಆಡಿಸುತ್ತ, ಹೊರಗಡೆ ಅಡ್ಡಾಡಿಸುತ್ತ ಊಟ ಮಾಡಿಸುವುದು ರೂಢಿ. ಆದರೆ ಇಲ್ಲೊಂದು ಮಗುವಿಗೆ ಅದೇ ದುರಂತ ಅಂತ್ಯ ತಂದೊಡ್ಡಿದೆ.

ಊಟ ಮಾಡಿಸುವ ವೇಳೆ ತಲೆಯ ಮೇಲೆ ತೆಂಗಿನ ಕಾಯಿ ಬಿದ್ದು 11 ತಿಂಗಳ ಮಗು ಸಾವಿಗೀಡಾಗಿದೆ.

Home add -Advt

ಹಾವೇರಿ ಜಿಲ್ಲೆಯಲ್ಲಿ ಇಂತಹ ಅನಾಹುತ ಸಂಭವಿಸಿದೆ. ಹಿರೇಕೆರೂರು ತಾಲೂಕಿನ ಹಂಸಬಾವಿಯಲ್ಲಿ 11 ತಿಂಗಳ ಮಗುವನ್ನು ಹೊರಗಡೆ ಕರೆದುಕೊಂಡು ಬಂದು ಊಟ ಮಾಡಿಸುವ ವೇಳೆ ತೆಂಗಿನ ಕಾಯಿಯೊಂದು ಮಗುವಿನ ತಲೆಯ ಮೇಲೆ ಬಿದ್ದಿದೆ. ತಕ್ಷಣ ಮಗುವನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಮಲ್ಲಿಕಾರ್ಜುನ ಮತ್ತು ಮಾಲಾ ಎನ್ನುವ ದಂಪತಿಯ ಮಗು ತನ್ವಿತ್ ಸಾವಿಗೀಡಾದ ಮಗು.

ಮಕ್ಕಳ ಬಗ್ಗೆ ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ.

ಪೆಟ್ಟಿಗೆಯಲ್ಲಿ ತೇಲಿ ಬಂದ ಮಗು; ಮಹಾಭಾರತ ನೆನಪಿಸಿದ ಘಟನೆ

ಪೆಟ್ರೋಲ್ ಆಯ್ತು, ಡಿಸೆಲ್ ದರವೂ ಶತಕದ ಸನಿಹ

Related Articles

Back to top button