ಪ್ರಗತಿವಾಹಿನಿ ಸುದ್ದಿ; ಮೈಸೂರು: ಮಹಿಳೆಯರಿಗೆ ಹಾಗೂ ಹೆಣ್ಣು ಮಕ್ಕಳನ್ನು ಕಾಡುವ ಸ್ತ್ರೀರೋಗಗಳ ಬಗ್ಗೆ ತಪಾಸಣೆ ನಡೆಸಿ ಪ್ರತ್ಯೇಕ ವಾಗಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ 10 ಸ್ವಾಸ್ತ್ಯ ಕ್ಲಿನಿಕ್ ಅನ್ನು ಪ್ರಾರಂಭ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಧಿಕಾರಿ ಪ್ರಸಾದ್ತಿ ಳಿಸಿದರು.
ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಪೈಲೇಟ್ ಪ್ರಜೆಕ್ಟ್ ಆಗಿ ಆಯ್ದ 10 ಸ್ಥಳ ಗಳಲ್ಲಿ ಮಹಿಳಾ ಸ್ವಾಸ್ತ್ಯ ಕ್ಲಿನಿಕ್ ಆರಂಭಿಸಲಾಗುವುದು. ಹಾಗೂ ನಂತರ ಬೇಡಿಕೆ ಅನುಗುಣವಾಗಿ ಇನ್ನುಳಿದ ಜಿಲ್ಲೆ ಗಳಲು ಪ್ರಾರಂಭ ಮಾಡಲಾಗುವುದು ಎಂದರು.
ಮಹಿಳೆಯರನ್ನು ಕಾಡುವ ಹಲವು ಸ್ತ್ರೀ ರೋಗಗಳಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಸೌಲಭ್ಯ ದೊರತಿರುವುದಿಲ್ಲ. ಅಲ್ಲಿಗೆ ಪುರುಷರು ಬಂದಿರುತ್ತಾರೆ. ಹಾಗೂ ಮಹಿಳೆ ಯಾರು ತಮ್ಮ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಹಿಂಜರಿಯುತ್ತಾರೆ. ಹಾಗೂ ಮೈಸೂರು ನಗರ ವ್ಯಾಪ್ತಿಯಲ್ಲಿ 21 ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿದ್ದು ಅದರಲ್ಲಿ 10 ಆರೋಗ್ಯ ಕೇಂದ್ರಗಳಲ್ಲಿ ಮಹಿಳಾ ಸ್ವಾಸ್ತ್ಯ ಕ್ಲಿನಿಕ್ ಅನ್ನು ಸ್ಥಾಪನೆ ಮಾಡಲಾಗುವುದು ಹಾಗೂ ಸ್ತ್ರೀ ರೋಗ ತಜ್ಞರು, ಆಪ್ತಸಮಾಲೋಚಕರು, ಮಹಿಳಾ ಸಿಬ್ಬಂದಿ ಗಳು ನಿಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಸಚಿವ ಶ್ರೀರಾಮುಲು ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ
https://pragati.taskdun.com/latest/shreeramuluchargesheet-releasev-s-ugrappa/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ