Latest

*KPTCL ಅಧಿಕಾರಿಗಳ ನಡುವೆ ಮಾರಾಮಾರಿ; ರೌಡಿಗಳಂತೆ ಹೊಡೆದಾಡಿಕೊಂಡ ಆಫೀಸರ್ಸ್*

ಪ್ರಗತಿವಾಹಿನಿ ಸುದ್ದಿ: ಕೆಪಿಟಿಸಿಎಲ್ ಅಧಿಕಾರಿಗಳು ಬೀದಿ ರೌಡಿಗಳಂತೆ ಹೊಡೆದಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡದ ಹೊರವಲಯದಲ್ಲಿ ನಡೆದಿದೆ.

ಕೆಲಸಕ್ಕೆ ಗೈರಾಗಿ ಹಾಡಹಗಲೇ ಭರ್ಜರಿ ಎಣ್ಣೆ ಪಾರ್ಟಿಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಕಂಠಪೂರ್ತಿ ಕುಡಿದು, ಬೀಯರ್ ಬಾಟಲ್ ಗಳಲ್ಲಿ ಮನಬಂದಂತೆ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಓರ್ವ ಅಧಿಕಾರಿ ತಲೆಗೆ ಗಂಭೀರವಾಗಿ ಗಾಯಗಳಾಗಿದ್ದು, ರಕ್ತ ಸುರಿಯುತ್ತಿದ್ದರೂ ಹೊಡೆದಾಟ ನಿಲ್ಲಿಸಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮೇ 23ರಂದು ಹಾಡಹಗಲೇ ಪಾರ್ಟಿಯಲ್ಲಿ ಪಾಲ್ಗೊಡ ಕೆಪಿಟಿಸಿಎಲ್ ಇಂಜಿನಿಯರ್ ಗಳು, ಬೆಸ್ಕಾಂ ಸಿಬ್ಬಂದಿಗಳು ಕಂಠಪೂರ್ತಿ ಕುಡಿದು ಬಡಿದಾಡಿಕೊಂಡಿದ್ದಾರೆ. ಪಾರ್ಟಿಯಲ್ಲಿ ಕೆಪಿಟಿಸಿಎಲ್ ಇಂಜಿನಿಯರ್ ಗಳಾದ ಶ್ರೀಧರ್, ವಾದಿರಾಜ್ ಹಾಗೂ ಬೆಸ್ಕಾಂ ಸಿಬ್ಬಂದಿ ನರಸಿಂಹಮೂರ್ತಿ, ಸಂತೋಷ್ ನಡುವೆ ಗಲಟೆ ನಡೆದು ಮಾರಾಮಾರಿ ನಡೆದಿದೆ ಎಂದು ತಿಳಿದುಬಂದಿದೆ.

Home add -Advt


Related Articles

Back to top button