
ಪ್ರಗತಿವಾಹಿನಿ ಸುದ್ದಿ: ಎರಡು ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದ ಗರ್ಭಿಣಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಇಲ್ಲಿನ ಕಾಟಿಹಳ್ಳಿ ಗ್ರಾಮದಲ್ಲಿ ಈ ಘತನೆ ನಡೆದಿದೆ. ಪುಷ್ಪಾ (25) ಮೃತ ಮಹಿಳೆ. ಬಂಜಾರಾ ಸಮಾಜದ ಹರೀಶ್ ಎಂಬಾತನನನ್ನು ಪ್ರೀತಿಸಿ ಮಾದಿಗ ಸಮಾಜದ ಪುಷ್ಪಾ ವಿವಾಹವಾಗಿದ್ದರು. ಮದುವೆ ಬಳಿಕ ಹರೀಶ್ ಹಾಗೂ ಕುಟುಂಬದವರು ಪುಷ್ಪಾಳಿಗೆ ಅವಮಾನ ಮಾಡುತ್ತಿದ್ದರು. ಬೈಯ್ಯುವುದು, ಕಿರುಕುಳ ನೀಡುವುದು ಮಾಡುತ್ತಿದ್ದರು. ಬೇರೆ ಜಾತಿ ಎಂಬ ಕಾರಣಕ್ಕೆ ದ್ವೇಷಿಸುತ್ತಿದ್ದರು. ಇದೇ ಕಾರಣಕ್ಕೆ ಪುಷ್ಪಾಳನ್ನು ಕೊಟ್ಟಿಗೆಯಲ್ಲಿ ವಾಸಿಸುವಂತೆ ಹೇಳುತ್ತಿದ್ದರು ಎಂದು ಪುಷ್ಪಾ ಪೋಷಕರು ಆರೋಪಿಸಿದ್ದಾರೆ.
ಈಗ ಮಗಳು ಪುಷ್ಪಾ ಶವವಾಗಿ ಪತ್ತೆಯಾಗಿದ್ದು, ಪತಿ ಹಾಗೂ ಮನೆಯವರೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಪುಷ್ಪಾ ಪೋಷಕರು ಆರೋಪಿಸಿದ್ದಾರೆ.


