
ಪ್ರಗತಿವಾಹಿನಿ ಸುದ್ದಿ: ಅದಾಗಲೇ ಎರಡು ಮದುವೆಯಾಗಿ 12 ವರ್ಷದ ಮಗನಿದ್ದರೂ ಪೊಲೀಸ್ ಕಾನ್ಸ್ ಟೇಬಲ್ ಜೊತೆ ರೀಲ್ಸ್ ಹುಚ್ಚಾಟಕ್ಕೆ ಸಿಲುಕಿ ಪ್ರೀತಿ-ಪ್ರೇಮ ಎಂದು ಮಹಿಳೆ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಹೆಚ್ ಎಸ್ ಆರ್ ಠಾಣೆಯ ಹೊಯ್ಸಳ ವಾಹನ ಚಾಲಕನಾಗಿದ್ದ ಪಿಸಿ ರಾಘವೇಂದ್ರ ಜೊತೆ ಮಹಿಳೆ ಮೋನಿಕಾ ಪರಾರಿಯಾಗಿದ್ದಾರೆ. ಮಹಿಳೆ ಮೋನಿಕಾ ಈಗಾಗಲೇ ಮೊದಲ ಪತಿಯನ್ನು ಬಿಟ್ಟು ಎರಡನೇ ಮದುವೆಯಾಗಿದ್ದರು. ಅಲ್ಲದೇ 12 ವರ್ಷದ ಮಗನಿದ್ದಾನೆ. ಆದಾಗ್ಯೂ ಇನ್ ಸ್ಟಾ ಗ್ರಾಂ ನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ರಾಘವೇಂದ್ರಗೆ ಪರಿಚಯವಾಗಿ ಇಬ್ಬರ ನಡುವೆ ಸಲುಗೆ ಬೆಳೆದಿದೆ.
ಪೊಲೀಸ್ ಕಾನ್ಸ್ ಟೇಬಲ್ ರಾಘವೇಂದ್ರಗೂ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ. ಆದಾಗ್ಯೂ ಆಂಟಿಯ ಲವ್ ನಲ್ಲಿ ಬಿದ್ದಾರೆ. ರಾಘವೇಂದ್ರ ಹಾಗೂ ಮೋನಿಕಾ ಇಬ್ಬರ ಪರಿಚಯ ರೀಲ್ಸ್ ವಿಡಿಯೋಗೂ ತಿರುಗಿದ್ದೂ ಇಬ್ಬರೂ ಸೋಷಿಯಲ್ ಮೀಡಿಯಾಗಳಲ್ಲಿ ಜೊತೆಯಾಗಿ ರೀಲ್ಸ್ ಗಳನ್ನು ಮಾಡಿ ಹರಿಬಿಡುತ್ತಿದ್ದರು.
ಮೋನಿಕಾ ಎರಡನೇ ಪತಿಗೂ ಕೈಕೊಡಲು ನಿರ್ಧರಿಸಿ ಕೆಲ ದಿನಗಳ ಹಿಂದೆ ಪತಿ ವಿರುದ್ಧ ಆರೋಪ ಮಾಡಿ ಠಾಣೆಯಲ್ಲಿ ದೂರು ನೀಡಿದ್ದಳು. ಮಹಿಳೆ ದೂರು ಆಧರಿಸಿ ಆಕೆಯ ಪತಿಯನ್ನು ಕರೆದು ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದರು. ಈ ಘಟನೆ ಬಳಿಕ ಪಿಸಿ ರಾಘವೇಂದ್ರ ಹಾಗೂ ಮೋನಿಕಾ ನಡುವಿನ ಮಾತುಕತೆ, ಸಲುಗೆ ಮತ್ತಷ್ಟು ವಿಪರೀತಕ್ಕೆ ಹೋಗಿತ್ತು. ಪತಿ ಮನೆಯಿಂದ ಹೊರಗಿದ್ದ ವೇಳೆ ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ, 1.80 ಲಕ್ಷ ಹಣವನ್ನು ಎಗರಿಸಿರುವ ಮೋನೊಕಾ, ಪಿಸಿ ರಾಘವೇಂದ್ರ ಜೊತೆ ಎಸ್ಕೇಪ್ ಆಗಿದ್ದಾಳೆ. ಮನೆಗೆ ಬಂದು ನೋಡಿದಾಗ ವಿಷಯ ತಿಳಿದ ಮೋನೊಕಾ ಪತಿ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾನ್ಸ್ ಟೆಬಲ್ ರಾಘವೇಂದ್ರನನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ.




