Karnataka News

*ಸೆಲ್ಫಿ ಕ್ಲಿಕ್ಕಿಸಲು ಹೋಗಿ ಅಂಜನಾದ್ರಿ ಬೆಟ್ಟದಿಂದ ಕೆಳಗೆ ಬಿದ್ದ ಮಹಿಳೆ*

ಪ್ರಗತಿವಾಹಿನಿ ಸುದ್ದಿ : ಕಿರಿದಾದ ಬಂಡೆಗಳ ತುದಿಯಲ್ಲಿ ಮಹಿಳೆಯೊಬ್ಬರು ಸೆಲ್ಫಿ ಕ್ಲಿಕ್ಕಿಸಲು ಹೋಗಿ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಘಟನೆ ಕೊಪ್ಪಳದ ಅಂಜನಾದ್ರಿಯಲ್ಲಿಯಲ್ಲಿ ನಡೆದಿದೆ.

ಅಂಜನಾದ್ರಿ ಬೆಟ್ಟದಕ್ಕೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ, 525 ಮೆಟ್ಟಿಲುಗಳನ್ನು ಹತ್ತಿ ಬೆಟ್ಟದ ಮೇಲಿನ ಹನುಮಂತನ ದರ್ಶನ ಪಡೆಯಲು ನಾಮುಂದು ತಾಮುಂದು ಎಂದು ಆಗಮಿಸುತ್ತಾರೆ. ದರ್ಶನ ಪಡೆದ ಬಳಿಕ ಅಲ್ಲೇ ಬಂಡೆಯ ತುದಿಯಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ.

ಹೀಗೆ ಆಂಜನೇಯನ ದರ್ಶನ ಪಡೆದು ಸೆಲ್ಸಿ ಕ್ಲಿಕ್ಕಿಸಲು ಹೋಗಿ ಮಹಿಳೆಯೊಬ್ಬರು ಕಾಲು ಜಾರಿ ಸುಮಾರು 35-40 ಅಡಿ ಕೆಳಕ್ಕೆ ಬಿದ್ದಿದ್ದು, ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾಳೆ. ಮಹಿಳೆ ಬೀಳುತ್ತಿರುವುದನ್ನು ಗಮನಿಸಿದ ಭಕ್ತರು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಎಚ್ಚೆತ್ತ ದೇವಸ್ಥಾನದ ಸಿಬ್ಬಂದಿಗಳು ಹಗ್ಗದ ಮೂಲಕ ಮಹಿಳೆಯ ಬಳಿ ಹೋಗಿದ್ದಾರೆ. ಈ ವೇಳೆ ಮಹಿಳೆ ಅರೆಪ್ರಜ್ಞಾವಸ್ಥೆಯಲ್ಲಿದ್ದು ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿ ಯುವತಿಯನ್ನು ಮೇಲಕ್ಕೆ ಕರೆತರಲಾಯಿತು.

ಕೂಡಲೇ ಆಂಬುಲೆನ್ಸ್‌ ಸಹಾಯದಿಂದ ಗಂಗಾವತಿ ತಾಲೂಕು ಆಸ್ಪತ್ರೆಗೆ ಹಾಗೂ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಘಟನೆಯ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button