Kannada NewsKarnataka NewsLatest

ಅಲತಗೆ ಖಡಿಮಷಿನ್ ಖ್ವಾರಿ ಹೊಂಡದಲ್ಲಿ ಬಿದ್ದು ಮಹಿಳೆ ಸಾವು

ಪ್ರಗತಿವಾಹಿನಿ ಸುದ್ದಿ, ಅಗಸಗಿ: ಎಮ್ಮೆ ತೊಳೆಯಲು ಹೋಗಿ ಕಾಲು ಜಾರಿ ಬಿದ್ದು ರವಿವಾರ ಸಾಯಂಕಾಲ ತಾಲೂಕಿನ  ಅಲತಗೆ ಗ್ರಾಮದ ಮಹಿಳೆಯೊಬ್ಬಳು ಸಾವನಪ್ಪಿದ್ದಾರೆ.
ರೂಪಾ ರೂಪೇಶ ಚೌಗಲೇ (30) ಮೃತ ದುರ್ದೈವಿ. ಅಲತಗೆ ಗ್ರಾಮದ ಇವರು ಭಾನುವಾರ ತಮ್ಮ ಹೊಲದಲ್ಲಿ ಭತ್ತ ಕೊಯ್ಲು ಮಾಡಿ, ತಮ್ಮ ಎರಡು ಮಕ್ಕಳನ್ನು ಜೊತೆಗೆ ಕರೆದುಕೊಂಡು ಸಂಜೆ ಸಮಯದಲ್ಲಿ ಎಮ್ಮೆಗಳ ಮೈ ತೊಳೆಯಲು ಸಮಿಪದಲ್ಲಿರುವ ನೀರು ತುಂಬಿರುವ  ಹೊಂಡಕ್ಕೆ (ಖ್ವಾರಿ) ಹೋಗಿದ್ದಾರೆ. ಆ ಸಮಯದಲ್ಲಿ ಆಯ ತಪ್ಪಿ ಆಳಕ್ಕೆ ಜಾರಿ ಮುಳುಗಿ ಸಾವನಪ್ಪಿದ್ದಾರೆ.

ಮಕ್ಕಳೆದುರೆ ಮುಳುಗಿದ ತಾಯಿ

ನೀರಿನಲ್ಲಿ ತಾಯಿ ಮುಳುಗುವುದನ್ನು ಗಮನಿಸಿದ 10 ಹಾಗೂ 12 ವರ್ಷದ ಇಬ್ಬರು ಗಂಡು ಮಕ್ಕಳು ತಾಯಿಯನ್ನು ಕಾಪಾಡಲು ಬಡಿಗೆ ಕೊಟ್ಟಿದ್ದಾರೆ. ಆದರೆ ಅದು ಕೈಗೆ ಸಿಗದೆ ಮಕ್ಕಳೆದುರೆ 40 ಅಡಿಯಷ್ಟಿರುವ ನೀರಿನಲ್ಲಿ ತಾಯಿ ಮುಳುಗಿದ್ದಾರೆ. ಆಗ ಮಕ್ಕಳು ಚೀರಾಡಿದ್ದಾರೆ. ನಂತರ ಸಮೀಪದಲ್ಲಿದ್ದ ಜನ ಮತ್ತು ಗ್ರಾಮಸ್ಥರು ಸೇರಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ  ಪೊಲೀಸರು ರಾತ್ರಿ  ಹೊತ್ತಿಗೆ ಹೊಂಡದಲ್ಲಿದ್ದ ಮಹಿಳೆಯ ಮೃತ ದೇಹವನ್ನು ಹೊರತೆಗೆದು ಶವ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ವರ್ಷದಲ್ಲಿ ಈ ಹೊಂಡದಲ್ಲಿ ಇಬ್ಬರು ಸಾವು

  3 ತಿಂಗಳ ಹಿಂದಷ್ಟೆ ಚಲವೇನಟ್ಟಿ ಗ್ರಾಮದ ಯುವಕನೋರ್ವ ಇಲ್ಲಿ ಸಾವನಪ್ಪಿದ್ದ. ಅದು ಆತ್ಮಹತ್ಯೆ ಅಂತಾ ಪ್ರಕರಣ ದಾಖಲಾಗಿತ್ತು.
ಹಲವು ವರ್ಷಗಳ ಹಿಂದೆ ಅಲತಗೆ ಗ್ರಾಮದವರ ಈ ಜಾಗವನ್ನು ಗುತ್ತಿಗೆ ಪಡೆದವರು ಭಾರಿ ಪ್ರಮಾಣದಲ್ಲಿ ಕಲ್ಲುಗಾರಿಕೆ ನಡೆಸಿ ದೊಡ್ಡ ಪ್ರಮಾಣದಲ್ಲಿ ಹೊಂಡಗಳಾದ ನಂತರ ಬಿಟ್ಟು ಹೋಗಿದ್ದಾರೆ. ಮಳೆಗಾಲದಲ್ಲಿ  ಈ ಹೊಂಡಗಳಲ್ಲಿ ತುಂಬಿದ ನೀರನ್ನು ಕುಡಿಯಲು ದನ ಕರುಗಳು ಬಂದು ಕಾಲು ಜಾರಿ ಬಿದ್ದು ಸಾವನಪ್ಪುತ್ತಿದ್ದು, ಈ ಹೊಂಡದ ಸುತ್ತ ಬೇಲಿ ಹಾಕುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button