
ಪ್ರಗತಿವಾಹಿನಿ ಸುದ್ದಿ: ವಿಚ್ಛೇದಿತ ಮಹಿಳೆಯನ್ನು ಟಾರ್ಚರ್ ನೀಡಿ, ಮದುವೆಗೆ ಒಪ್ಪದ್ದಕ್ಕೆ ಚಾಕು ಇರಿದು ಅನ್ಯ ಕೋಮಿನ ಯುವಕ ಮರ್ಡರ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆಯಾದ ಮಹಿಳೆಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ನೀಡಿದ್ದಾರೆ.
ರಫೀಕ್ ಎಂಬಾತನಿಂದ ಬರ್ಬರವಾಗಿ ಹತ್ಯೆಗೀಡಾದ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕಾಳಮ್ಮನಗರದಲ್ಲಿರುವ ರಂಜಿತಾ ಅವರ ನಿವಾಸಕ್ಕೆ ಬಿ.ವೈ ವಿಜಯೇಂದ್ರ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮೃತ ರಂಜಿತಾ ಅವರ ಕುಟುಂಬಕ್ಕೆ ಬಿಜೆಪಿಯಿಂದ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ.
ಜ .3 ರಂದು ಈ ಘಟನೆ ನಡೆದಿದ್ದು ತನ್ನನ್ನು ವಿವಾಹವಾಗಲು ಒಪ್ಪದ ಕಾರಣ ಚಾಕುವಿನಿಂದ ಇರಿದು ರಂಜಿತಾ ಎಂಬ ಮಹಿಳೆಯನ್ನು ರಫೀಕ್ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ. ಇದಾದ ಬಳಿಕ ಇಂದು ಬೆಳಗ್ಗೆ ಆರೋಪಿ ರಫೀಕ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ.




