Latest

ಜಿಮ್ ನಲ್ಲಿ ತಲೆಕೆಳಗಾಗಿ ಸಿಲುಕಿದ ಮಹಿಳೆ; ಸ್ಮಾರ್ಟ್ ವಾಚ್ ಬಳಸಿ ಪಾರು

ಪ್ರಗತಿವಾಹಿನಿ ಸುದ್ದಿ, ನ್ಯೂಯಾರ್ಕ್: ಬೆಳಗಿನಜಾವ 3 ಗಂಟೆಗೆದ್ದು ಜಿಮ್ ಮಾಡಲು ಹೋಗಿದ್ದ ಮಹಿಳೆಯೊಬ್ಬರು ಜಿಮ್ ನ ಟೇಬಲ್ ನಲ್ಲಿ ತಲೆಕೆಳಗಾಗಿ ಸಿಲುಕಿ ಫಜೀತಿಗೀಡಾದ ಸಂದರ್ಭದಲ್ಲಿ ಸ್ಮಾರ್ಟ್ ವಾಚ್ ಅವರನ್ನು ಉಳಿಸಿದೆ.

ಈ ಘಟನೆ ನಡೆದಿದ್ದು ಯುಎಸ್ ನ ಓಹಿಯೊದಲ್ಲಿ. ಬೆನ್ನು ನೋವು ನಿವಾರಣೆಗಾಗಿ ಜಿಮ್ ಗೆ ದಾಖಲಾಗಿದ್ದ ಮಹಿಳೆ ಬೆಳಗಿನಜಾವ ವ್ಯಾಯಾಮಕ್ಕೆ ಮುಂದಾಗಿದ್ದಾರೆ. ಈ ವೇಳೆ ಜಿಮ್ ನ ಟೇಬನ್ ನಲ್ಲಿ ತಲೆಕೆಳಗಾಗಿ ವ್ಯಾಯಾಮ ಮಾಡುವಾಗ ಅದರಲ್ಲಿ ಸಿಲುಕಿಕೊಂಡಿದ್ದಾರೆ. ದೇಹದ ತೂಕ ಕೊಂಚ ಜಾಸ್ತಿಯೇ ಇದ್ದುದರಿಂದ ಸಕಾಲಕ್ಕೆ ಅಲ್ಲಿಂದ ನುಣುಚಿಕೊಳ್ಳಲಾಗದೆ ಒದ್ದಾಡಿದ್ದಾರೆ.

ಈ ವೇಳೆ ಸಮಯಪ್ರಜ್ಞೆಯಿಂದ ತಮ್ಮ ಸ್ಮಾರ್ಟ್ ವಾಚ್ ಬಳಸಿ 911 ಸಹಾಯವಾಣಿಗೆ ಕರೆ ಮಾಡುತ್ತಲೇ ಅವರನ್ನು ರಕ್ಷಿಸಲಾಗಿದೆ.

ತಾವು ವ್ಯಾಯಾಮ ಮಾಡುವುದನ್ನು ಸ್ವತಃ ಈ ಮಹಿಳೆ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳುತ್ತಿದ್ದರು. ಅದೀಗ  ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಇತಿಹಾಸದಲ್ಲಿ ಕಂಡರಿಯದ ರೌದ್ರಾವತಾರತಾಳಿದ ಮಳೆ; ಬೆಂಗಳೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥ; ಸರಣಿ ಟ್ವೀಟ್ ಮಾಡಿ ಸಚಿವರು ಹೇಳಿದ್ದೇನು?

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button