ಪ್ರಗತಿವಾಹಿನಿ ಸುದ್ದಿ, ಮುಂಬಯಿ: ಯುಕೆ ವಿಸಾ ಸ್ಟಾಂಪಿಂಗ್ ಪಡೆಯುವುದಕ್ಕಾಗಿ ಖಾಸಗಿ ವಿಸಾ ಸೌಲಭ್ಯ ಸಂಸ್ಥೆಯೊಂದಕ್ಕೆ ತಮ್ಮ ಪಾಸ್ ಪೋರ್ಟ್ ನೀಡಿದ್ದ ಮಹಿಳೆಯೊಬ್ಬರು ಐರ್ಲ್ಯಾಂಡ್ ನ ಹೋಟೆಲ್ ಒಂದರ 1.05 ಲಕ್ಷದ ಬಿಲ್ ಕಂಡು ಬೆಚ್ಚಿಬಿದ್ದಿದ್ದಾರೆ.
ಮುಂಬಯಿಯ 29 ವರ್ಷದ ಮಹಿಳೆ ಈ ಕುರಿತು ಸಮತಾನಗರ ಪೊಲೀಸ್ ಠಾಣೆಯಲ್ಲಿ ಖಾಸಗಿ ವಿಸಾ ಸೌಲಭ್ಯ ಸಂಸ್ಥೆ ವಿರುದ್ಧ ದೂರು ದಾಖಲಿಸಿದ್ದಾರೆ.
ಈ ಸಂಸ್ಥೆಗೆ ಮಹಿಳೆ ತಮ್ಮ ಪಾಸ್ ಪೋರ್ಟ್ ನೀಡಿದ ಕೆಲ ದಿನಗಳ ಬಳಿಕ ಅವರ ಇ-ಮೇಲ್ ಗೆ ಐರ್ಲ್ಯಾಂಡ್ ನ ಡಬ್ಲಿನ್ ನ ಹೋಟೆಲ್ ಒಂದರ ಮೆನು ಸಹಿತ ಬಿಲ್ ಬಂತು. ಇದರಿಂದ ಕಂಗಾಲಾದ ಮಹಿಳೆ ಹೋಟೆಲ್ ನ ಸಂಪರ್ಕ ಪತ್ತೆ ಮಾಡಿ ವಿಚಾರಿಸಿದಾಗ ಹೋಟೆಲ್ ಮುಂಗಡ ಬುಕಿಂಗ್ ಗಾಗಿ ಮಹಿಳೆಯ ಪಾಸ್ ಪೋರ್ಟ್ ಸಂಖ್ಯೆ ನೀಡಿರುವ ವಿಷಯ ಗೊತ್ತಾಗಿದೆ.
ಕೂಡಲೆ ಅವರು ಮುಂಬೈ ಪೊಲೀಸರನ್ನು ಸಂಪರ್ಕಿಸಿದ್ದು ಇದೊಂದು ಗುರುತಿನ ಕಳ್ಳತನ ಪ್ರಕರಣ ಎಂಬುದು ತಿಳಿದುಬಂದಿದೆ. ಖಾಸಗಿ ವಿಸಾ ಸೌಲಭ್ಯ ಸಂಸ್ಥೆ ತಮ್ಮ ಪಾಸ್ ಪೋರ್ಟ್ ನ್ನು ದುರುಪಯೋಗಪಡಿಸಿಕೊಂಡಿದ್ದಾಗಿ ಆರೋಪಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಟ ಅಕ್ಷಯ್ ಕುಮಾರ್ ಚಿರಯೌವ್ವನ ಶ್ಲಾಘಿಸಿದ ಚಿರಂಜೀವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ