Latest

ಇಲಿ ಪಾಷಾಣ ಸೇವಿಸಿ ಮಹಿಳೆ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಪತಿ ಹಾಗೂ ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಚ್ಚೂರು ಗ್ರಾಮದಲ್ಲಿ ನಡೆದಿದೆ.

22 ವರ್ಷದ ಜ್ಯೋತಿ ಆತ್ಮಹತ್ಯೆಗೆ ಶರಣಾದ ಮಹಿಳೆ. 4 ವರ್ಷಗಳ ಹಿಂದೆ ಆನಂದ್ ಎಂಬಾತನ ಜತೆ ವಿವಾಹವಾಗಿದ್ದ ಜ್ಯೋತಿಗೆ ಪತಿ ಹಾಗೂ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು.

ತವರಿಂದ ಹಣ, ಒಡವೆ ವರದಕ್ಷಿಣೆ ತರುವವರೆಗೂ ತವರು ಮನೆಯವರು ಮನೆಗೆ ಬರಲು ಅವಕಾಶ ಕೊಡುವುದಿಲ್ಲ ಎಂದು ತಾಕೀತು ಮಾಡಿದ್ದರು. ಅಲ್ಲದೇ ಜ್ಯೋತಿ ಭೇಟಿಯಾಗಲು ಬಂದ ಪೋಷಕರಿಗೆ, ಸಂಬಂಧಿಕರಿಗೆ ಭೇಟಿಗೂ ಅವಕಾಶ ನೀಡದೇ ಅವಮಾನ ಮಾಡಿ ಕಳುಹಿಸಿದ್ದರು. ಕುಟುಂಬದವರ ಹಿಂಸೆ, ಕಿರುಕುಳಕ್ಕೆ ಬೇಸತ್ತ ಜ್ಯೋತಿ ಇಲಿ ಪಾಷಾಣ ಸೇವಿಸಿದ್ದಳು.

ತೀವ್ರ ಅಸ್ವಸ್ಥಳಾಗಿದ್ದ ಅವಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾಳೆ. ಅಂತರಸಂತೆ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.

Home add -Advt

ಡೋಲೊ ಅಕ್ರಮಗಳ ತನಿಖೆಗೆ ಸಮಿತಿ ರಚನೆ

Related Articles

Back to top button