Latest

*ಮಹಿಳೆಯನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೋರ್ವ ಮಹಿಳೆ ಹತ್ಯೆಗೈದು ಬಳಿಕ ತಾನೂ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ನಡೆದಿದೆ.

ಹೇಮಾವತಿ ಕೊಲೆಯಾದ ಮಹಿಳೆ. ವೇಣು ಮಹಿಳೆಯನ್ನು ಕೊಂದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹೇಮಾವತಿ ಕೆಲಸಕ್ಕಾಗಿ ನಾಲ್ಕು ತಿಂಗಳ ಹಿಂದೆ ಆಂಧ್ರದಿಂದ ಬೆಂಗಳೂರಿಗೆ ಬಂದಿದ್ದರು. ಹೊಸಕೋಟೆ ನಗರದಲ್ಲಿ ಮನೆ ಬಾಡಿಗೆ ಪಡೆದು ವಾಸವಾಗಿದ್ದರು. ಹೊಸಕೋಟೆ ಪೆಟ್ರೋಲ್ ಬಂಕ್ ನಲ್ಲಿ ಹೇಮಾವತಿ ವಾಸವಾಗಿದ್ದರು.

ವೇಣು ಎಂಬಾದ 3-4 ದಿನಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ. ಎರಡು ದಿನಗಳ ಹಿಂದೆ ಹೇಮಾವತಿ ಮನೆಗೆ ಬಂದ ವೇನು ಬಳಿಕ ನಿನ್ನೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ತೆರಳಿದ್ದು, ಚಿಂತಾಮಣಿಯಲ್ಲಿನ ತನ್ನ ಪತ್ನಿ ಮನೆಗೆ ತೆರಳಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತನ್ನ ಮಾವನಿಗೆ ಕರೆ ಮಾಡಿ ಹೊಸಕೋಟೆಯಲ್ಲಿ ಓರ್ವ ಮಹಿಳೆ ಚಾಕುವಿನಿಂದ ಇರಿದುಕೊಂಡಿದ್ದು, ನಾನು ವಿಷ ಸೇವಿಸಿದ್ದೇನೆ ಎಂದಿದ್ದಾನೆ. ತಕ್ಷಣ ವೇಣು ಮಾವ ಹೊಸಕೋಟೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ವೇನುನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತನಿಖೆ ನಡೆಸಿದ ಪೊಲೀಸರಿಗೆ ಕೊಲೆ ರಹಸ್ಯ ಬಯಲಾಗಿದೆ. ವೇಣು ಎಂಬಾತ ಹೇಮಾವತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಹೊಸಕೋಟೆಯ ಬಾಡಿಗೆ ಮನೆಯಲ್ಲಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾನೆ. ಬಳಿಕ ತನ್ನ ಮನೆಗೆ ಹೋಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಆರೋಪಿ ವೇಣುನನ್ನು ಆಸ್ಪತ್ರೆಯಲ್ಲಿ ಬಂಧಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button