Belagavi NewsBelgaum NewsKarnataka News

*ಬಾವಿಯಲ್ಲಿ ಮಹಿಳೆಯ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ತಾಲೂಕಿನ ಕಬ್ಬೂರ ಸಮೀಪದ ವಿಜಯನಗರ ಗ್ರಾಮದಲ್ಲಿ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಶವ ಪತ್ತೆಯಾಗಿದೆ.

ಮೃತ ಮಹಿಳೆಯು ಪವಿತಾ ಚೇತನ ಮುತನಾಳೆ (23) ಮಾನಸಿಕವಾಗಿ ಅಸ್ಥವ್ಯಸ್ಥೆಯಾಗಿದ್ದು, ಬುಧವಾರ ಮನೆಯಿಂದ ಕಾಣೆಯಾಗಿ ವಿಜಯನಗರ ಗ್ರಾಮದ ಹತ್ತಿರದ ಬಾವಿಗೆ ಹಾರಿ ಮೃತಪಟ್ಟ ಘಟನೆ ಜರುಗಿದೆ.

ಶವ ಶುಕ್ರವಾರ ಮೇಲೆ ತೆಲುತ್ತಿರುವುದನ್ನು ಕಂಡ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಇವರು ಮೂಡಲಗಿಯಿಂದ ಕೂಲಿ ಕೆಲಸ ಮಾಡಲು ವಿಜಯನಗರ ಗ್ರಾಮದಲ್ಲಿ ವಾಸವಿದ್ದರು. 

ಈ ಕುರಿತು ಚಿಕ್ಕೋಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಕಬ್ಬೂರ ಉಪಠಾಣೆಯ ಎಎಸ್‌ಐ ಮಾರುತಿ ಉಗಾರೆ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button