Karnataka NewsLatest

*ದರ್ಶನ್ ಉದಾಹರಣೆ ಕೊಟ್ಟು ಪತಿಯಿಂದ ಪತ್ನಿಗೆ ಟಾರ್ಚರ್; ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಹೆಂಡತಿ*

ಪ್ರಗತಿವಾಹಿನಿ ಸುದ್ದಿ; ಪತಿಯ ಅನೈತಿಕ ಸಂಬಂಧ, ಕಿರುಕುಳಕ್ಕೆ ನೊಂದ ಪತ್ನಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅನುಷಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. 5 ವರ್ಷಗಳ ಹಿಂದೆ ಅನುಷಾ ಹಾಗೂ ಶ್ರೀಹರಿ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಮಗಳಿದ್ದಾಳೆ. ಆದಾಗ್ಯೂ ಪತಿ ಮಹಾಶಯ ಇನ್ನೋರ್ವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದನಂತೆ. ತನಗೆ ಡಿವೋರ್ಸ್ ಕೊಡು ತಾನು ಮತ್ತೊಂದು ಮದುವೆಯಾಗುತ್ತೇನೆ ಎಂದು ಟಾರ್ಚರ್ ಕೊಡುತ್ತಿದ್ದನಂತೆ.

ದರ್ಶನ್ ಎರಡು ಮದುವೆ ಆಗಿಲ್ವಾ? ಹಾಗೇ ನಾನೂ ಆಗ್ತೀನಿ ಎಂದು ಪತ್ನಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದೂ ಅಲ್ಲದೇ, ಅಸಹ್ಯವಾಗಿ ಮಾತನಾಡುತ್ತ, ಹುಚ್ಚಾಟ ಮೆರೆಯುತ್ತಿದ್ದ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಪತಿ ಪತ್ನಿ ಜಗಳ ತಾರಕ್ಕೇರಿದೆ. ಪತಿಯ ಹುಚ್ಚಾಟಕ್ಕೆ ಬೇಸತ್ತ ಅನುಷಾ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಗಂಭೀರ ಸ್ಥಿತಿ ತಲುಪಿದ್ದ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇದೀಗ ಅನುಷಾ ಸಾವನ್ನಪ್ಪಿದ್ದಾರೆ.

ಅಳಿಯ ತನ್ನ ಮಗಳಿಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟು ಬಲಿಪಡೆದಿದ್ದಾನೆ. ದರ್ಶನ್ ಹೇಗೆ 2 ಮದುವೆಯಾಗಿದ್ದನಲ್ಲ. ನಾನೂ ಹಾಗೆ ಎರಡು ಮದುವೆ ಆಗ್ತೀನಿ. ನನಗೆ ಡಿವೋರ್ಸ್ ಕೊಡು. ನಾನು ಗಂಡಸು ಏನು ಬೇಕಾದರೂ ಮಾಡಬಹುದು. ದರ್ಶನ್ ಮಾಡಿಲ್ವಾ? ಎಂದು ಮನಬಂದಂತೆ ಮಾತನಾಡುತ್ತಿದ್ದ ಎಂದು ಅನುಷಾ ತಾಯಿ ಕಣ್ಣೀರಿಟ್ಟಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button