ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಫೈನಾನ್ಸ್ ನವರ ಕಿರುಕುಳ, ಮೀಟರ್ ಬಡ್ಡಿ ದಂಧೆಕೋರರ ಹಾವಳಿಗೆ ನೊಂದ ಅದೆಷ್ಟೋ ಕುಟುಂಬಗಳು ಆತ್ಮಹತ್ಯೆಯಂತಹ ನಿರ್ಧಾರ ಮಾಡುತ್ತಿದ್ದಾರೆ. ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಈ ನಡುವೆಯೇ ಸಾಲು ಸಾಲು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ.
ಪತಿ ಮಾಡಿದ ಸಾಲಕ್ಕೆ ನೊಂದ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಇಲ್ಲಿನ ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ಮಹಿಳೆ ನೇನಿಗೆ ಕೊರಳೊಡ್ಡಿದ್ದಾರೆ.
ಮನೆ ಕಟ್ಟಲು ಪತಿ 5 ಲಕ್ಷ ರೂಪಾಯಿ ಸಾಲ ಮಾಡಿದ್ದರಂತೆ. ಸಾಲದ ಸುಳಿಯ ಚಿಂತೆಯಿಂದಾಗಿ ಪತ್ನಿ ಮಹದೇವಮ್ಮ ತೀವ್ರವಾಗಿ ಮನನೊಂದಿದ್ದರಂತೆ. ಪತಿ ಮಾಡಿದ್ದ ಸಾಲದ ಬಗ್ಗೆ ಯೋಚಿಸಿ ಕೊರಗಿದ್ದ ಮಹದೇವಮ್ಮ ಖಿನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಇಂದು ಯಾರೂ ಇಲ್ಲದ ವೇಳೆ ಮಹದೇವಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ