Latest
ಮದುವೆಯಾಗಿ ವರ್ಷದಲ್ಲೇ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾದ ಮಹಿಳೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮದುವೆಯಾಗಿ ವರ್ಷ ಕಳೆಯುವುದರಲ್ಲಿ ಮಹಿಳೆಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಮರಸೂರು ಗ್ರಾಮದಲ್ಲಿ ನಡೆದಿದೆ.
19 ವರ್ಷದ ರಮ್ಯಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ರಮ್ಯಾ ರೈಲಿಗೆ ಸಿಲುಕಿ ಸಾವಿಗೆ ಶರಣಾಗಿದ್ದಾಳೆ.
ಮರಸೂರು ಗ್ರಾಮದ ಅಂಜಿ ಎಂಬಾತನ ಜತೆ ರಮ್ಯಾ ವಿವಾಹವಾಗಿತ್ತು. ಮದುವೆಯಾಗಿ ಇನ್ನೂ ಒಂದು ವರ್ಷವಾಗಿತ್ತು. ಪದೇ ಪದೇ ಪತಿ-ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಮನನೊಂದು ಮನೆಯಿಂದ ತೆರಳಿದ್ದ ರಮ್ಯಾ ಇದೀಗ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ.
ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




