Latest

ಹೆತ್ತಮ್ಮನನ್ನೇ ಬಡಿದು ಕೊಂದ ಮಗ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಕ್ರೂರಿ ಮಗನೊಬ್ಬ ಹೆತ್ತ ತಾಯಿಯನ್ನೇ ಹೊಡೆದು ಕೊಂದ ದಾರುಣ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ.

ಶಾಂತವ್ವ ಕಲ್ಲಪ್ಪ ಅಣ್ಣಿಗೇರಿ (65) ಕೊಲೆಯಾದ ಮಹಿಳೆ. ಬಸವರಾಜ್ ಕಲ್ಲಪ್ಪ ಅಣ್ಣಿಗೇರಿ ತನ್ನ ತಾಯಿಯನ್ನೇ ಕೊಲೆಗೈದಿದ್ದಾನೆ.

Home add -Advt

ಆಸ್ತಿ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದ ಮಗ ಇಂದು ಕೂಡ ಇದೇ ವಿಚಾರವಾಗಿ ಕ್ಯಾತೆ ತೆಗೆದಿದ್ದಾನೆ. ಆಸ್ತಿ ಬರೆದುಕೊಡುವಂತೆ ತಾಯಿಯನ್ನು ಪೀಡಿಸಿದ್ದಾನೆ. ಕೋಪದಲ್ಲಿ ಬಸವರಾಜ್ ದೊಣ್ಣೆಯಿಂದ ಹೊಡೆದು ತಾಯಿಯನ್ನು ಹತ್ಯೆಗೈದಿದ್ದಾನೆ.

ಪ್ರಕರಣ ಸಂಬಂಧ ಆರೋಪಿ ಬಸವರಾಜ್ ನನ್ನು ಅಣ್ಣಿಗೇರಿ ಪೊಲೀಸರು ಬಂಧಿಸಿದ್ದಾರೆ.
ನನ್ನ ವಿರುದ್ಧದ ಕಾಂಗ್ರೆಸ್ ಆರೋಪ ಆಧಾರ ರಹಿತ; ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ

Related Articles

Back to top button