Kannada NewsKarnataka NewsLatest

*ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಹಿಳೆಯೊಬ್ಬರು ಮಗುವನ್ನು ಸ್ವಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಸಕಲವಾರ ಕೆರೆಯಲ್ಲಿ ನಡೆದಿದೆ.

ವಿಜಯಲಕ್ಷ್ಮೀ (35) ತನ್ನ ಮಗ 7 ವರ್ಷದ ಹರಿಹರನ್ ನನ್ನು ಸೊಂಟಕ್ಕೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಂಧ್ರ ಮೂಲದ ವಿಜಯಲಕ್ಷ್ಮೀ, ಸಿ.ಕೆ.ಪಾಳ್ಯದಲ್ಲಿ ವಾಸವಾಗಿದ್ದರು. 2 ವರ್ಷದ ಹಿಂದೆ ಬೈಕ್ ಅಪಘಾತದಲ್ಲಿ ಪತಿಯನ್ನು ಕಳೆದುಕೊಂಡಿದ್ದರು. ಪತಿ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿದ್ದ ವಿಜಯಲಕ್ಷ್ಮೀ ದುಡುಕಿನ ನಿರ್ಧರ ಮಾಡಿದ್ದಾರೆ.

Home add -Advt

ವಿಜಯಲಕ್ಷ್ಮೀ ಪತಿ ಸಾವನ್ನಪ್ಪಿ ಇಂದಿಗೆ ಎರಡು ವರ್ಷ. ಪತಿ ಸಾವಿನ ದಿನವೇ ಮಗನೊಂದಿಗೆ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

Back to top button