ಪ್ರಗರಿವಾಹಿನಿ ಸುದ್ದಿ, ಕಾರದಗಾ: ಇಂದು ಮಹಿಳೆ ಅಬಲೆಯಲ್ಲ, ಬದಲಾಗಿ ಎಲ್ಲ ಕ್ಷೇತ್ರಗಳಲ್ಲೂ ಸಬಲೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಕರೆ ನೀಡಿದರು.
ಅವರು ಜೊಲ್ಲೆ ಎಜುಕೇಶನ್ ಸೊಸೈಟಿಯ ಅಂಗಸಂಸ್ಥೆ ನಣದಿಯ ಮೌಲಾನಾ ಅಬುಲ್ ಕಲಾಂ ಆಜಾದ್ ಬಿ.ಎಸ್. ಡಬ್ಲ್ಯು/ಎಂ.ಎಸ್.ಡಬ್ಲ್ಯು ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಕಾರದಗಾ ಗ್ರಾಮದಲ್ಲಿ ನಡೆಯುತ್ತಿರುವ ಸಮಾಜ ಕಾರ್ಯ ವಿಶೇಷ ಗ್ರಾಮೀಣ ಶಿಬಿರದ ಮೂರನೇ ದಿನ ಮಹಿಳಾ ಸಬಲೀಕರಣ ಕುರಿತ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆದು ಸ್ವಯಂ ಉದ್ಯೋಗಗಳನ್ನು ಕೈಗೊಂಡು ಸ್ವಾವಲಂಬಿ ಜೀವನ ಸಾಗಿಸಬೇಕೆಂದು ಅವರು ಕರೆ ನೀಡಿದರು.
ಕೊಲ್ಲಾಪುರದ ನಿವೃತ್ತ ಪ್ರಾಧ್ಯಾಪಕಿ ಹೇಮಾ ಗಂಗಾತಿರ್ಕರ ಅವರು ಮಹಿಳಾ ಸಬಲೀಕರಣ ವಿಷಯದ ಕುರಿತು ಉಪನ್ಯಾಸ ನೀಡಿ, ಮಹಿಳೆಯರು ತಮ್ಮ ಗೃಹಗಳಲ್ಲಿಯೇ ಲಘು ಉದ್ಯೋಗ ಚಟುವಟಿಕೆಗಳನ್ನು ನಡೆಸಿ ಆರ್ಥಿಕ ಸ್ವಾವಲಂಬನೆ ಹೊಂದಲು ತಿಳಿಸಿದರು.
ಕೊಲ್ಲಾಪುರದ ಸ್ವಯಂ ಸಿದ್ಧ ಸಂಸ್ಥೆಯ ಸಂಚಾಲಕಿ ಸೌಮ್ಯ ಶಿರೋಡಕರ ಲಘು ಉದ್ಯೋಗ ಚಟುವಟಿಕೆಗಳನ್ನು ನಿರ್ವಹಿಸುವ ಕುರಿತು ವಿವರಿಸಿದರು.
ಕೊಲ್ಲಾಪುರದ ಸ್ವಯಂ ಸಿದ್ಧ ಸಂಸ್ಥೆಯ ತಂಡದಿಂದ ಮಹಿಳೆಯರಿಗಾಗಿ ಲಘು ಉದ್ಯೋಗ ಮಾರ್ಗದರ್ಶನದ ಪ್ರಾತ್ಯಕ್ಷಿಕೆ ನಡೆಯಿತು. ಗ್ರಾಮದ ನೂರಾರು ಮಹಿಳೆಯರು ಸ್ವಯಂ ಉದ್ಯೋಗ ತರಬೇತಿ ಪಡೆದರು. ಶಿಬಿರಾರ್ಥಿಗಳು ಗ್ರಾಮದ ಮನೆ ಮನೆಗೆ ತೆರಳಿ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಕುರಿತು ಸಾಮಾಜಿಕ ಸಮೀಕ್ಷೆ ನಡೆಸಿದರು.
ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆ ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡಾ ಪಾಟೀಲ, ನಿಪ್ಪಾಣಿ ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಿನಿ ಜಮದಾಡೆ, ಅಶ್ವಿನಿ ಭಿಡೆ, ಅರುಣಾ ಖೋತ, ವನಿತಾ ಸಪ್ತಸಾಗರೆ, ಗೋದಾಬಾಯಿ ಗಾವಡೆ, ಮಂಗಳಾ ಕುಂಬಾರ, ವೈಶಾಲಿ ಖರಾಡೆ, ಯೋಗಿನಿ ಕುಲಕರ್ಣಿ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಎ.ಬಿ. ಅಕ್ಕೋಳೆ, ಗ್ರಾಮದ ಮುಖಂಡರು, ಕಾರ್ಯಕರ್ತರು, ಸಿಬ್ಬಂದಿ ವರ್ಗ, ಶಿಬಿರಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸರೋಜಿನಿ ಕೋರೆ ಸ್ವಾಗತಿಸಿದರು. ಪ್ರಮೋದ ಖೋತ ವಂದಿಸಿದರು. ಅರವಿಂದ ಕಾಂಬಳೆ ನಿರೂಪಿಸಿದರು . ಸುಹಾನಿ ಜೋಡಟ್ಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕೇಂದ್ರೀಯ ಪರೀಕ್ಷೆಗಳು ಕನ್ನಡದಲ್ಲಿಯೇ ನಡೆಯಲಿ: ಕೇಂದ್ರ ಸರ್ಕಾರಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮನವಿ
https://pragati.taskdun.com/central-exams-should-be-held-in-kannada-mla-balachandra-jarakiholi-appeals-to-the-central-government/
ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸಮನ್ವಯದ ಕಾರ್ಯವಾಗಲಿ: ಕೆ.ನಾಗಣ್ಣಗೌಡ
https://pragati.taskdun.com/conciliation-should-be-done-to-bring-children-in-legal-conflict-into-the-mainstream-k-naganna-gowda/
*ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ*
https://pragati.taskdun.com/cm-basavaraj-bommaib-k-hariprasadreactionchikkamagaluru-habba/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ