ಸಿದ್ದೇಶ್ವರ ಸ್ವಾಮಿಜೀ ವೇದಿಕೆ ಕನ್ಹೇರಿಮಠ, (ಸಿದ್ದಗೀರಿ ಕೊಲ್ಹಾಪುರ): ಆಕಾಶ, ನೀರು, ತೇಜಸ್ಸು, ವಾಯು, ಭೂಮಿ ಈ ಪಂಚ ಮಹಾಭೂತಗಳನ್ನು ನಾವಿಂದು ಮರೆಯುತ್ತಿದ್ದು, ಮುಂದಿನ ಯುವ ಪೀಳಿಗೆಗೆ ಇದರ ತಿಳುವಳಿಕೆ ನೀಡುವಲ್ಲಿ ಮಹಿಳೆಯರಿಂದ ಬದಲಾವಣೆ ತರಲು ಸಾಧ್ಯವಿದೆ ಎಂದು ಮುಜರಾಯಿ, ಹಜ್ ಹಾಗೂ ವಕ್ಫ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಅವರು ಶುಕ್ರವಾರ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ಹೇರಿಯ ಸಿದ್ದಗಿರಿ ಮಠದ ಆವರಣದಲ್ಲಿ ಫೆ ೨೬ರವರೆಗೆ ನಡೆಯುತ್ತಿರುವ ಸುಮಂಗಲ ಪಂಚಮಹಾಭೂತ ಲೋಕೋತ್ಸವದಲ್ಲಿ ಜಲತತ್ವ ಮಹಿಳಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಗರ್ಭವತಿಯಾದ ಮಹಿಳೆ ಗರ್ಭದಲ್ಲೇ ಸಂಸ್ಕಾರ ನೀಡುವ ಜವಾಬ್ದಾರಿ ಮಹಿಳೆಯರಿಂದ ಅಗ್ಯವಿದೆ. ಪೃಕೃತಿ, ಗೋಮಾತೆ, ಭೂಮಿ ರಕ್ಷಣೆ ಅಗತ್ಯವಿದೆ ಎಂದರು.
ನಿಪ್ಪಾಣಿ ವಿಧಾನ ಸಭೆ ಕ್ಷೇತ್ರದಲ್ಲಿ ಸುಮಾರು ೧೦೧ ಜನ ಮಹಿಳೆಯರಿಗೆ ೧೪ ತರಹದ ಹಣ್ಣು ಹಂಪಲ ಸಸಿಗಳನ್ನು ನೀಡಿ ಬೆಳೆಸಲು ಉತ್ತೇಜನ ನೀಡಲಾಗಿದ್ದು, ನೀರು ಸಂರಕ್ಷಣೆ ಮಾಡದಿದ್ದರೆ ಜಲಯುದ್ದ ಆಗುವ ಸಾಧ್ಯತೆ ಇದೆ. ಆದ್ದರಿಂದ ನೀರನ್ನು ಸರಿಯಾಗಿ ಬಳಸಿ ಉಳಿಸಬೇಕಾದ ಅಗತ್ಯವಿದೆ ಎಂದರು.
ಮಾಗ್ನೇಸೆಸ್ ಪ್ರಶಸ್ತಿ ವಿಜೇತ ರಾಜೇಂದ್ರ ಸಿಂಗ್ ಮಾತನಾಡಿ, ಪಂಚಭೂತಗಳನ್ನು ದೇವರೆಂದು ಆರಾಧಿಸುತ್ತಿದ್ದು,ಶೃದ್ಧಾ ನಿಷ್ಠೇ,ಭಕ್ತಿ ಪ್ರೇಮ ಹೊಂದಿರಬೇಕು.ದೇವರನ್ನು ಗುರುತಿಸುವ ವಿದ್ಯೆ ಪುನರ್‌ಸ್ಥಾಪನೆಯಾಗಬೇಕಾಗಿದೆ ಎಂದರು.
ಗುಜರಾತ ರಾಜ್ಯಪಾಲರಾದ ಆಚಾರ್ಯ ದೈವವೃತ್ತ ಮಾತನಾಡಿ, ಪಂಚತತ್ವಗಳು ಇಲ್ಲದ ಜೀವನ ಕಲ್ಪಿಸಲು ಸಾಧ್ಯವಿಲ್ಲ, ಮನುಷ್ಯನಿಗೆ ಒಂದಿಷ್ಟು ದಿನ ಉಟವಿಲ್ಲದೇ ಹೋದರೆ ಬದುಕುತ್ತಾನೆ. ಆದರೆ ಗಾಳಿ ಕೇವಲ ಮೂರು ನಿಮಿಷ ಇಲ್ಲವಾದಲ್ಲಿ ಮೃತ್ತುವಿನಿಂದ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಜಲಬಾಧೆ ಮಾಡುತ್ತಿದ್ದಾನೆ.ಭೂಮಿಯಲ್ಲಿ ಅಸಂಖ್ಯಾತ ಜೀವ ಜಂತುಗಳು ಇವೆ.ಆದರೆ ಪ್ರಾಣಿಗಳು ಪಂಚಮಹಾಭೂತಗಳನ್ನು ನಾಶ ಮಾಡುವುದಿಲ್ಲ,ಆದರೆ ಮನುಷ್ಯ ಪೃಕೃತಿಯನ್ನು ನಾಶ ಮಾಡುತ್ತಿದ್ದಾನೆ. ಕರೋನಾ ಸಂದರ್ಭದಲ್ಲಿ ಲಾಕಡೌನ್ ಮನುಷ್ಯನಿಗೆ ಮಾತ್ರ ಇದ್ದು ಆದರೆ ಪ್ರಾಣಿಗಳಿಗೆ ಇತ್ತೇ,ಆ ಸಂದರ್ಭದಲ್ಲಿ ನದಿಗಳು ಸ್ವಚ್ಚವಾದವು,ವಾತಾವರಣ ಶುದ್ದವಾಯಿತು ಎಂದು ತಿಳಿಸಿದರು.
ಕೃಷಿಕರು ರಾಸಾಯನಿಕ ಕೀಟನಾಶಕ ಬಳಸುತ್ತಿರುವುದರಿಂದ ತಾಯಿ ಎದೆ ಹಾಲಿನಲ್ಲಿಯು ರಾಸಾಯನಿಕ ದೊರೆಯುತ್ತಿರುವುದು ವರದಿಯಾಗಿದೆ.ಇದೆ ರೀತಿ ಮುಂದುವರೆದರೇ ಬರುವ ೨೦ ವರ್ಷಗಳಲ್ಲಿ ಕ್ಯಾನ್ಸರ್ ಭಯಾನಕವಾಗಿ ಹರಡಲಿದೆ. ಇದನ್ನು ಉಳಿಸಿಕೊಳ್ಳಲು ಪಂಚಮಹಾಭೂತ ಉಳಿಸಿ, ಪೃಕೃತಿ ಉಳಿಸಿಕೊಳ್ಳಬೇಕಾಗಿದೆ ಎಂದರು.
ಡಿಆರ್‌ಐ ದೆಹಲಿಯ ಅತುಲ್ ಜೈನ್, ಲಕ್ಷ್ಮಣ ಸಿಂಹ ಲಾಪೋಡಿಯಾ, ಕಾನ್‌ಸಿಂಹ ನಿರ್ವಾಣ ರಾಜಸ್ಥಾನ,ಕಮಲೇಶ ಗುಪ್ತಾ, ರಾಜೇಂದ್ರ ಸಿಂಗ್ ಜೀ,ಪ್ರದೀಪ್ ಮಿಶ್ರಾ,ಗೋಪಾಲ ಉಪಾಧ್ಯಾಯ, ಸುರೇಶ್ ಖಾನಾಪುರ ಉಪಸ್ಥಿತರಿದ್ದರು. ಉದಯ ಸಾಳುಂಕೆ ವಂದಿಸಿದರು.
ಪಂಚಮಹಾಭೂತಗಳು ಇಲ್ಲದೇ ಯಾರೂ ಬದುಕುವುದಕ್ಕೆ ಸಾಧ್ಯವಿಲ್ಲ – ರಾಜ್ಯಪಾಲ ತಾವರಚಂದ್ ಗೆಹ್ಲೋಟ್
https://pragati.taskdun.com/no-one-can-live-without-panchamahabhuta-governor-tawarchand-gehlot/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ