Kannada NewsKarnataka News

*ಗೃಹಲಕ್ಷ್ಮಿ ಹಣದಲ್ಲಿ ಫ್ರಿಡ್ಜ್ ಖರೀದಿಸಿದ ಉಪ್ಪಲದೊಡ್ಡಿ ಗ್ರಾಮದ ಮಹಿಳೆ*

ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ ಹನುಮಮ್ಮ

ಪ್ರಗತಿವಾಹಿನಿ ಸುದ್ದಿ, ಸಿಂಧನೂರು :

ರಾಜ್ಯದ ಕಾಂಗ್ರೆಸ್ ಸರ್ಕಾರ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆ ಗ್ರಾಮೀಣ ಭಾಗದ ಮನೆಗಳಲ್ಲಿ ಹೊಸ ಆಶಾಕಿರಣ ಮೂಡಿಸಿದೆ.

Home add -Advt

ಸಿಂಧನೂರು ತಾಲೂಕಿನ ಉಪ್ಪಲದೊಡ್ಡಿ ಗ್ರಾಮದ ನಿವಾಸಿ ಹನುಮಮ್ಮ ದುರುಗಪ್ಪ ನಡುಲುಮನಿ ಅವರು, ತಮಗೆ ಪ್ರತಿ ತಿಂಗಳು ಬರುತ್ತಿದ್ದ 2 ಸಾವಿರ ಗೃಹಲಕ್ಷ್ಮಿ ಹಣ ಉಳಿತಾಯ ಮಾಡಿ ತಮ್ಮ ಮನೆಗೆ ಒಂದು ಹೊಸ ಫ್ರಿಡ್ಜ್ ಖರೀದಿಸುವ ಮೂಲಕ ಆರ್ಥಿಕ ಸಬಲೀಕರಣದ ಹಾದಿಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಭರವಸೆಗಳು ಹೇಗೆ ಸಾಮಾನ್ಯ ಜನರ ಬದುಕಿನಲ್ಲಿ ಹೆಮ್ಮೆಯ ಬೆಳಕು ತರುತ್ತಿವೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ.

ಸರ್ಕಾರದ ಹಣವನ್ನು ಅತ್ಯಂತ ಜಾಣ್ಮೆಯಿಂದ ಸದುಪಯೋಗಪಡಿಸಿಕೊಂಡು, ತಮ್ಮ ಮನೆಯ ದಶಕಗಳ ಕನಸನ್ನು ನನಸು ಮಾಡಿಕೊಂಡ ಹನುಮಮ್ಮನವರ ಸಾಧನೆ ಸ್ತ್ರೀಶಕ್ತಿಯ ಗೌರವವನ್ನು ಎತ್ತಿ ಹಿಡಿದಿದೆ.

“ಬೆಲೆ ಏರಿಕೆಯ ಈ ಕಾಲದಲ್ಲಿ ಪ್ರತಿ ತಿಂಗಳು ಸಿಗುವ 2 ಸಾವಿರ ಸಾಮಾನ್ಯ ಕುಟುಂಬಕ್ಕೆ ಹಾಲಿನ ಬಿಲ್, ತರಕಾರಿ ಅಥವಾ ಮಕ್ಕಳ ಸಣ್ಣಪುಟ್ಟ ಶಾಲಾ ಖರ್ಚುಗಳನ್ನು ನಿಭಾಯಿಸಲು ದೊಡ್ಡ ಶಕ್ತಿಯಾಗಿದೆ. ನೇರ ನಗದು ವರ್ಗಾವಣೆ (ಡಿಬಿಟಿ) ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಣ ತಲುಪುತ್ತಿರುವುದು ಸರ್ಕಾರದ ಪಾರದರ್ಶಕತೆಗೆ ಸಾಕ್ಷಿ.

ಮಹಿಳೆಯರ ಕೈಗೆ ಹಣ ಬಂದಾಗ ಮಾರುಕಟ್ಟೆಯಲ್ಲಿ ಖರ್ಚಾಗುತ್ತದೆ, ಇದರಿಂದ ಸ್ಥಳೀಯ ಆರ್ಥಿಕತೆಗೂ ಚೈತನ್ಯ ಸಿಗುತ್ತದೆ. ಟೀಕೆಗಿಂತ ಕೆಲಸ ಮುಖ್ಯ, ಗ್ಯಾರಂಟಿ ಯೋಜನೆಗಳು ಜಾರಿಯಾಗುವುದಿಲ್ಲ ಎಂದು ವಿರೋಧ ಪಕ್ಷದವರು ಭವಿಷ್ಯ ನುಡಿದಿದ್ದರು. ಆದರೆ ಇಂದು ರಾಜ್ಯದ ಕೋಟ್ಯಂತರ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ. ಟೀಕೆ ಮಾಡುವ ಮೊದಲು ಜನರ ಮುಖದಲ್ಲಿರುವ ನೆಮ್ಮದಿಯನ್ನು ನೋಡಬೇಕು. ರಾಜ್ಯ ದಿವಾಳಿಯಾಗುತ್ತೆ ಎಂದು ಹೇಳಿದ್ದರು. ಯೋಜನೆಗಳು ನಡೆಯುತ್ತಿವೆ, ರಾಜ್ಯದ ಪ್ರಗತಿಯೂ ಸಾಗುತ್ತಿದೆ’.

  • ಲಕ್ಷ್ಮೀ ಹೆಬ್ಬಾಳಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು

Related Articles

Back to top button