ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
“ಬಹಳ ವರ್ಷಗಳ ಹಿಂದೆ ಮನು ತನ್ನ ಶಾಸ್ತ್ರದಲ್ಲಿ ’ ನ ಸ್ತ್ರೀ ಸ್ವಾತಂತ್ರ್ಯಮ್ ಅರ್ಹತಿ’ ಎಂದು ಹೇಳುವ ಮೂಲಕ ಸ್ತ್ರೀಯರನ್ನು ಮನೆಯ ನಾಲ್ಕು ಗೋಡೆಗಳಲ್ಲಿ ಬಂಧಿಯನ್ನಾಗಿಸಿ ಅವಳ ಸ್ವಾತಂತ್ರ್ಯ ಹರಣ ಮಾಡಿದ್ದ. ಕಾಲಕ್ರಮೇಣ ಮಹಿಳೆಯರ ಮಹತ್ವವನ್ನರಿತು ಅವರನ್ನು ವಿದ್ಯೆಗೆ, ಸಂಪತ್ತಿಗೆ ಹಾಗೂ ಶಕ್ತಿಗೆ ಹೋಲಿಸಿ ಪೂಜನೀಯ ಸ್ಥಾನ ಕೊಟ್ಟರೂ ಸ್ವಾತಂತ್ರ್ಯ ಕೊಡಲಿಲ್ಲ” ಎಂದು ಬೆಳಗಾವಿಯ ಸಮಾಜ ಸೇವಕಿ ವೈಷ್ಣವಿ ವಿರೇಶ ಕಿವಡಸಣ್ಣವರ ಅಭಿಪ್ರಾಯ ಪಟ್ಟರು.
ಬೆಳಗಾವಿಯ ಕಾರಂಜಿ ಮಠದಲ್ಲಿ ಜರುಗಿದ ಶ್ರಾವಣ ಮಾಸದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಮೂರನೇ ಸೋಮವಾರದ ಕಾರ್ಯಕ್ರಮದಲ್ಲಿ ’ನೈತಿಕತೆ ಮತ್ತು ಆಧ್ಯಾತ್ಮಿಕತೆಯಲ್ಲಿ ಮಹಿಳೆಯ ಪಾತ್ರ’ ಕುರಿತು ಮಾತನಾಡಿದ ಅವರು, ” ಆಧುನಿಕ ಕಾಲದಲ್ಲಿ ಕವಯಿತ್ರಿ ಸಂಚಿ ಹೊನ್ನಮ್ಮ ತನ್ನ ಕವಿತೆಯಲ್ಲಿ ’ ಪೆನ್ನಲ್ಲವೇ ನಮ್ಮನ್ನು ಹೆತ್ತು ಪೊರೆದವಳು.. ಪೆನ್ನು ಪೆನ್ನೆಂದೇಕೆ ಬೀಳುಗಳೆವರು
ಕಣ್ಣು ಕಾಣದ ಗಾವಿಲರು’ ಎಂದು ಹೇಳುವ ಮೂಲಕ ಪುರುಷ ಪ್ರಧಾನ ಸಮಾಜಕ್ಕೆ ಸವಾಲು ಹಾಕಿದಳು. ತನ್ಮೂಲಕ ಸ್ತ್ರೀಯರಲ್ಲಿ ಆತ್ಮಸ್ಥೈರ್ಯ ತುಂಬಿದಳು. ಸಮಾಜದ ಆರೋಗ್ಯ ನೈತಿಕತೆಯ ಮಟ್ಟದ ಮೇಲಿದೆ. ನಾವೆಲ್ಲ ಸಣ್ಣವರಿದ್ದಾಗ ಮನೆಯ ಮೊದಲ ಗುರುವಾಗಿರುವ ಮಹಿಳೆಯರು ನಮಗೆ
ಸರಿ-ತಪ್ಪುಗಳ ಅರಿವನ್ನು ಮೂಡಿಸುತ್ತಿದ್ದರು. ಆ ನಿಟ್ಟಿನಲ್ಲಿ ಹೇಳುವುದಾದರೆ ಇಂದಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ನೈತಿಕತೆ ಮತ್ತು ಆಧ್ಯಾತ್ಮಿಕತೆಯಲ್ಲಿ ಹಿಂದುಳಿಯುತ್ತಿದ್ದಾರೆ” ಎಂದು ಕಳವಳ ವ್ಯಕ್ತಪಡಿಸಿದರು.
ಶ್ರೀಮಠದ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, “ಇಂದು ಮಹಿಳೆಯರು ಕಲೆ, ಸಾಹಿತ್ಯ, ಕ್ರೀಡೆ, ರಾಜಕೀಯ, ವ್ಯಾಪಾರ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಿದ್ದಾರೆ. ಅವರಿಗೆ ಪುರು?ರ ಪ್ರೋತ್ಸಾಹ ಸಿಕ್ಕರೆ ಇನ್ನೂ ಹೆಚ್ಚಿನ ಸಾಧನೆ ಮಾಡಬಲ್ಲವರಾಗಿದ್ದಾರೆ. ಹೀಗಾಗಿ ಮನೆಯಲ್ಲಿ ಹಾಗೂ ಸಮಾಜದಿಂದ ಮಹಿಳೆಯರಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಸಹಕಾರ ಸಿಗುವಂತಾಗಲಿ” ಎಂದು ಆಶಿಸಿದರು.
ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾದ ಜಯಶೀಲಾ ಬ್ಯಾಕೋಡ ಅವರನ್ನು ಶ್ರೀಠದಿಂದ ಸತ್ಕರಿಸಿ ಗೌರವಿಸಲಾಯಿತು.
ಸಮಾಜಸೇವಕಿ ಹಾಗೂ ಕಲಾವಿದೆ ಶಾಂತಾ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಮೈತ್ರೆಯಿನಿ ಗದಿಗೆಪ್ಪಗೌಡರ ಕಾರಂಜಿಮಠದ ಮಾತೃ ಮಂಡಳಿ ಹಾಗೂ ’ಭಕ್ತಿ’ಸಂಗೀತ ಶಾಲೆಯ ಮಕ್ಕಳು ಹಾಡಿದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭಾರತಿ ಸಂಕಣ್ಣವರ ಸ್ವಾಗತಿಸಿದರು. ನಯನಾ ಗಿರಿಗೌಡರ ನಿರೂಪಿಸಿದರು. ಶೀಲಾ ಗುಡಸ ವಂದಿಸಿದರು.
https://pragati.taskdun.com/latest/govinda-karajolabelagavicheetaabhay-patil/
https://pragati.taskdun.com/latest/younggeneration-addicted-social-platforms-deny-girls-majority-anxiousness-world-survey/
https://pragati.taskdun.com/world-news/26-yr-aged-monisha-ropeta-became-the-first-hindhu-woman-police-officer-in-pakisthan/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ