ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ವೈಜ್ಞಾನಿಕ ಸಂಸ್ಥೆಯ 41ನೇ ಮುಂದುವರೆದ ವೈದ್ಯಕೀಯ ಶಿಕ್ಷಣ (ಸಿಎಂಇ) ಕರ‍್ಯಾಗಾರವನ್ನು ಇದೇ ದಿ. 8 ಮತ್ತು 9 ಏಪ್ರೀಲ್ 2023ರಂದು ಕೆಎಲ್‌ಇ ಕನ್ವೆನ್ಷನ್ ಸೆಂಟರ( ಬಿ ಎಸ್ ಜೀರಗೆ) ಸಭಾಭವನದಲ್ಲಿ ಏರ್ಪಡಿಸಲಾಗಿದ್ದು, “ಮಹಿಳೆಯರ ಆರೋಗ್ಯ: ಹೊಸ ದೃಷ್ಟಿಕೋನ” ಎಂಬ ವಿಷಯದ ಮೇಲೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಸ್ತ್ರೀ ತಮ್ಮ ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ, ನಮ್ಮ ಜನಸಂಖ್ಯೆಯ ಅರ್ಧದಷ್ಟು ಸ್ತ್ರೀ ಇದ್ದರೂ ಕೂಡ, ಲಿಂಗ ಅಸಮಾನತೆಗಳಿಂದಾಗಿ ನಿರ್ಲಕ್ಷಿಸಲ್ಪಟ್ಟು ಸಮಯಕ್ಕೆ ಸರಿಯಾಗಿ ಸಲಹೆ, ಚಿಕಿತ್ಸೆ ಪಡೆಯುವುದಿಲ್ಲ. ಆದ್ದರಿಂದ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ ಹದಿಹರೆಯದವರು, ಲೈಂಗಿಕ ಸಮಸ್ಯೆಗಳು, ಬಂಜೆತನ, ದೀರ್ಘಕಾಲದ/ಅನಿಯಮಿತ ಮುಟ್ಟಿನ ಚಕ್ರಗಳು, ಅಧಿಕ ರಕ್ತಸ್ರಾವ, ಪಾಲಿಸಿಸ್ಟಿಕ್ ಓವೇರಿಯನ್ ಸಿಸ್ಟ್ ಸಿಂಡ್ರೋಮ್ ಚರ್ಮದ ಅಸ್ವಸ್ಥತೆಗಳು, ಪ್ರಸವಪೂರ್ವ ತಪಾಸಣೆ, ಪೋಷಕಾಂಶತೆ, ಮಹಿಳೆಯರಲ್ಲಿ ಹೃದ್ರೋಗದ ಹೆಚ್ಚಳ. ಕಾನೂನು ರೀತಿಯಲ್ಲಿ ಗರ್ಭಪಾತ, ಋತುಬಂಧ, ಮನೋವೈದ್ಯಕೀಯ ಸಮಸ್ಯೆ ಹಾಗೂ ರಕ್ತಹೀನತೆ ಕುರಿತು ಚರ್ಚಿಸಲಾಗುತ್ತದೆ. ಹೆರಿಗೆ ಸಂದರ್ಭದಲ್ಲಿ ಮಹಿಳೆಯರ ಮರಣ ತಡೆಗಟ್ಟುವ ಹೊಸ ಸವಾಲುಗಳ ಕುರಿತು ಅಹ್ಮದಾಬಾದಿನ ಡಾ. ಅಲ್ಫೆಶ ಗಾಂದಿ ಅವರು ಡಾ. ಬಿ ಎಸ್ ಜೀರಗೆ ದತ್ತಿ ಉಪನ್ಯಾಸದಲ್ಲಿ ಮಾತನಾಡಲಿದ್ದಾರೆ.
ಎರಡು ದಿನಗಳ ಕಾಲ ಉಪನ್ಯಾಸ, ಗುಂಪು ಚರ್ಚೆ, ಪ್ರಶ್ನೋತ್ತರ, ರಸಪ್ರಶ್ನೆ ಜರುಗಲಿದೆ. ವೈದ್ಯಕೀಯ ಶಿಕ್ಷಣ ಕರ‍್ಯಾಗಾರದಲ್ಲಿ ಪಾಲ್ಗೊಳ್ಳುವ ವೈದ್ಯರಿಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಾಲ್ಕು ಕ್ರೆಡಿಟ್ ಅವರ್ಸ್ ನೀಡಲಿದೆ. ಸಾಮಾನ್ಯ ವೈದ್ಯರು ಸೇರಿದಂತೆ ಎಲ್ಲರೂ ಈ ಕರ‍್ಯಗಾರದಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದ್ದು, 1200 ರೂ.ಗಳನ್ನು ಪ್ರತಿನಿಧಿ ಶುಲ್ಕ ನೀಡಿ ತಮ್ಮ ಹೆಸರು ನೊಂದಾಹಿಸಿಕೊಳ್ಳಬಹುದು. ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಡಾ. ಅನುಷಾ ಮಾಲಾಪುರೆ 9964034168 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ