*ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅಮೂಲ್ಯವಾದದ್ದು : ಸುನಿತಾ ಪಾಟೀಲ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಅಮೂಲ್ಯವಾದದ್ದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಸುನಿತಾ ಪಾಟೀಲ ಅಭಿಪ್ರಾಯಪಟ್ಟರು.
ಸವದತ್ತಿಯ ಕೆ.ಎಂ.ಮಾಮನಿ ಸರಕಾರಿ ಪ್ರಥಮ ದರ್ಜೆಯ ಪದವಿ ಕಾಲೇಜಿನಲ್ಲಿ ಮಂಗಳವಾರ ಮಹಿಳಾ ಸಬಲಿಕರಣ ಘಟಕ, ಲೈಂಗಿಕ ಕಿರಕುಳು ನಿವಾರಣಾ ಘಟಕ ಹಾಗೂ ಆಂತರಿಕ ದೂರು ಸಮಿತಿ ಆಶ್ರಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ನಡೆದ ಮಹಿಳಾ ಸಬಲಿಕರಣ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರು ಯಾವುದೆ ಆಸೆ ಆಕಾಂಕ್ಷೆಗಳಿಗೆ ಮರುಳಾಗದೆ ತಮ್ಮ ಜೀವನವನ್ನು ತಾವೂ ಕಟ್ಟಿಕೊಳ್ಳಬೇಕು. ಇಂದು ಹಲವಾರು ಮೊಸದ ಪ್ರಕರಣಗಳು ನಡೆಯುತ್ತಿದ್ದು ಎಚ್ಚರಿಕೆಯಿಂದ ಇರಬೇಕು, ಭಾಲ್ಯ ವಿವಾಹ ಇನ್ನಿತರೆ ಯಾವೂದೆ ಕಾನೂನು ವಿರೋದಿ ಪ್ರಕರಣಗಳ ಮಾಹಿತಿ ತಿಳಿದು ಬಂದರೆ ಇಲಾಖೆಗೆ ತಿಳಸಬೇಕು ಎಂದರು.
ಧಾರವಾಡ ಉಚ್ಚ ನ್ಯಾಯಾಲಯದ ವಕೀಲೆ ಸ್ನೇಹಾ ಕಟ್ಟಿ ಮಾತನಾಡಿ, ಕಾನೂನು ಮಹಿಳೆಯರ ಪರವಾಗಿದ್ದು ಯಾವುದೆ ಪರಿಸ್ಥಿತಿಯಲ್ಲಿ ಧೈರ್ಯಗೆಡದೆ ಮುನ್ನಡೆಯಬೇಕು. ಯಾವುದೇ ಕಾರಣಕ್ಕೂ ಕಾನೂನು ದುರಪಯೋಗ ಪಡಸಿಕೊಳ್ಳಬಾರದು. ಪ್ರತಿಯೊಬ್ಬರು ಸರಿಯಾಗಿ ಸಂವಿದಾನವನ್ನು ಓದಿ ಅರ್ಥ ಮಾಡಿಕೊಳ್ಳಬೇಕು ಎಂದರು.
ದೌರ್ಜನ್ಯ ನಿಯಂತ್ರಣ, ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ಬಸವರಾಜ ಆಯಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಯಾರ ಮೆಲೆಯು ಅವಲಂಬನೆಯಾಗದೆ ಸ್ವಾವಲಂಬಿ ಜೀವನ ನಡೆಸಲು ಸರಕಾರ ಬೇಕಾದಷ್ಟು ಯೋಜನೆಗಳಿದ್ದು ಸದುಪಯೋಗಪಡೆದಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ.ಮಾರುತಿ ಎಂ. ಅಧ್ಯಕ್ಷತೆವಹಿಸಿದ್ದರು, ಶಕುಂತಲಾ ಅಜ್ಜನ್ನವರ ಪ್ರಾಸ್ತಾವಿಕ ಮಾತನಾಡಿದರು. ರೋಹಿಣಿ ಚುಂಚನೂರ ಪ್ರಾರ್ಥಿಸಿದರು, ರೋಹಿಣಿ ಬನಹಟ್ಟಿ ಸ್ವಾಗತಿಸಿದರು, ಮಧುಮತಿ ಗುರ್ಲಹೊಸುರ ನಿರೂಪಿಸಿದರು, ಡಾ.ಎಂ.ವಿ. ಚಲವಾದಿ, ಪ್ರೊ.ಬಿ.ಸಿ. ನಿಡಗುಂದಿ, ವಿದ್ಯಾರ್ಥಿ ಪ್ರತಿನಿಧಿ ಸವಿತಾ ಜಾಲಿಕಟ್ಟಿ, ಸುಮಾ ಜಾವೂರ, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತಿರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ