
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕಲಾವಿಧರ ಅಭಿವೃದ್ಧಿಗಾಗಿ ನಿರಂತರ ಸಹಕಾರ ನೀಡುತ್ತೇನೆ ಎಂದು ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕದ ಅಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಹೇಳಿದರು.
ಖ್ಯಾತ ಕಲಾವಿದ ಲಿಯನಾರ್ಡೋ ಡಾ ವಿನ್ಸಿ ಅವರ ಜನ್ಮ ದಿನದ ಪ್ರಯುಕ್ತ ನಗರದ ಕನ್ನಡಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕಲಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಲಲಿತಕಲಾ ಅಕಾಡೆಮಿ ಕಲೆ ಮತ್ತು ಕಲಾವಿದರ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯ ನಿರ್ವಹಿಸುತ್ತಿದೆ. ಕಲಾವಿದರ ಅಭಿವೃದ್ಧಿಗೆ ನಾನೂ ಸಹ ಸದಾ ಸಹಕಾರ ನೀಡುತ್ತೇನೆ ಎಂದರು.
ಕಲಾ ಮಂದಿರದ ಅಧ್ಯಾಪಕ ಪ್ರಕಾಶ ಪತ್ತಾರ, ಲಲಿತಕಲಾ ಅಕಾಡೆಮಿ ಸದಸ್ಯ ಪ್ರೋ. ಜಯಾನಂದ ಮಾದರ, ಚಿತ್ರ ಕಲಾವಿದ ಬಾಳು ಸದಲಗಿ ಮಾತನಾಡಿದರು. ತೈಲ ವರ್ಣದಲ್ಲಿ ಭಾವಚಿತ್ರ ಬಿಡಿಸುವ ಕುರಿತು ಡಾ. ಬಾಬುರಾವ್ ಪ್ರಾತ್ಯಕ್ಷಿಕೆ ನೀಡಿದರು.
ಕಲಾವಿದರಾದ ಮಹೇಶ ಹೊನ್ನುಳೆ, ವಿಠ್ಠಲ ಬಡಿಗೇರ ಇತರರು ಇದ್ದರು.
ಗ್ರಾಮೀಣ ಜನರೊಂದಿಗೆ ಬೆರೆತ ಡಾ. ಸೋನಾಲಿ ಸರ್ನೋಬತ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ