ಹಳೆ ಹುಬ್ಬಳ್ಳಿಯಲ್ಲಿ ಕಲ್ಲು ತೂರಾಟ: ಉದ್ವಿಘ್ನ ಪರಿಸ್ಥಿತಿ

 

ಪ್ರಗತಿ ವಾಹಿನಿ ಸುದ್ದಿ ಹುಬ್ಬಳ್ಳಿ
ಮಸೀದಿಯ ಮೇಲೆ ಭಗವಾಧ್ವಜ ಹಾರಿದಂತೆ ಕಾಣುವ ಎಡಿಟ್ ಮಾಡಿದ ವಿಡಿಯೋ ಒಂದು ಹುಬ್ಬಳ್ಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿದೆ.
ಆನಂದ ನಗರದ ಘೋಟಗೆ ಪ್ಲಾö್ಯಟ್‌ನ ವ್ಯಕ್ತಿಯೊಬ್ಬ ಮಸೀದಿಯ ಮೇಲೆ ಭಗವಾಧ್ವಜ ಹಾರಾಡುವಂತೆ ಕಾಣುವ ಎಡಿಟ್ ಮಾಡಿದ ವಿಡಿಯೋವನ್ನು ಸ್ಟೇಟಸ್‌ಗೆ ಹಾಕಿಕೊಂಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಯುವಕರ ಗುಂಪೊAದು ವ್ಯಕ್ತಿಯನ್ನು ಹಳೆ ಹುಬ್ಬಳ್ಳಿ ಠಾಣೆಗೆ ಎಳೆದು ತಂದಿದ್ದಾರೆ. ಯುವಕನನ್ನು ಠಾಣೆಗೆ ಕರೆತರುತ್ತಿದ್ದಂತೆ ನೂರಾರು ಜನ ಠಾಣೆ ಮುಂದೆ ಜಮಾಯಿಸಿದ್ದಾರೆ.
ಠಾಣೆ ಮುಂದೆ ಸೇರಿದ್ದ ಒಂದು ಕೋಮಿನ ಜನ ಪೊಲೀಸ್ ಜೀಪನ್ನು ದೂಡಾಡಿ ಹಾನಿ ಮಾಡಿದ್ದಲ್ಲದೆ ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ. ಪೊಲೀಸರು ಜನರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಿ ಅಶ್ರುವಾಯು ಸಿಡಿಸಿದ್ದಾರೆ.
ಪೊಲೀಸ್ ಠಾಣೆಯ ಎದುರು ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಗಲಭೆಗೆ ಕಾರಣರಾದ ಆರೋಪದ ಮೇಲೆ ಪೊಲೀಸರು ೩೦ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಡಿಸಿಪಿ ಸಾಹಿಲ್ ಬಾಗ್ಲಾ ಹಳೆ ಹುಬ್ಬಳ್ಳಿ ಠಾಣೆಗೆ ಆಗಮಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button