ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಹಿಂದವಾಡಿ ವತಿಯಿಂದ ಕಿಲ್ಲಾದಲ್ಲಿರುವ ಆರಾಧನಾ ಬುದ್ಧಿಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಶ್ವ ವಿಕಲಾಂಗ ಚೇತನರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಿವೃತ್ತ ಸೈನಿಕ ದೊಡ್ಡಪ್ಪ ಹಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲು ನಮ್ಮ ಮಾಜಿ ಸೈನಿಕರ ಸಂಘ ಸಿದ್ಧವಿದೆ.
ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಇಂತಹ ಬುದ್ಧಿ ಮಾಂದ್ಯ ಮಕ್ಕಳ ಶಾಲೆಯಲ್ಲಿ ವಿಶ್ವ ವಿಕಲಾಂಗ ಚೇತನರ ದಿನಾಚರಣೆ ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದರು.
ನಿವೃತ್ತ ಸೈನಿಕರಾದ ಶಿವಾನಂದ ಹಿರೇಮಠ, ಸಿದ್ಧರಾಮಪ್ಪ ರೊಟ್ಟಿ, ಮಹೇಶ ಕಮ್ಮಾರ, ದೊಡ್ಡಪ್ಪ ಹಂಜಿ, ಚನ್ನಪ್ಪ ಹಾಲಗಿಮರಡಿ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಆಟಗಾರರಾದ ಲಲಿತಾ ಗವಸ, ಮಾಯವ್ವ ಸನ್ನಿಂಗನವರ, ರಿಜವಾನಾ ಜಮಾದಾರ, ಶ್ರೀಕಾಂತ ದೇಸಾಯಿ, ಬಸಪ್ಪ ಸುಣಧೋಳಿ ಅವರನ್ನು ಸತ್ಕರಿಸಲಾಯಿತು.
ಸತ್ಕಾರ ಸ್ವೀಕರಿಸಿ ಮಾತನಾಡಿದ ಬಸಪ್ಪ ಸುಣಧೋಳಿ ಈ ಎರಡೂ ಸಂಸ್ಥೆಗಳ ಅಧ್ಯಕ್ಷೆಯಾಗಿರುವ ಮಂಗಲ ಮಠದ ಅವರ ಸಾಮಾಜಿಕ ಕಳಕಳಿಗೆ ನಾವು ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಅವರಿಗೆ ಇನ್ನು ಹೆಚ್ಚಿನ ಸೇವೆ ಮಾಡುವ ಶಕ್ತಿ ದೇವರು ಕರುಣಿಸಲಿ ಎಂದರು.
ಪ್ರತಷ್ಠಾನದ ಅಧ್ಯಕ್ಷೆ ಮಂಗಲಾ ಮಠದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆರಾಧನಾ ಶಾಲೆಯ ಪ್ರಧಾನ ಗುರುಗಳಾದ ಗಜಾನನ ಸುತಾರ ಆಗಮಿಸಿದ್ದರು.
ರತ್ನಾ ಗುಡಗನಟ್ಟಿ, ಹೇಮಾ ಭರಭರ, ರೇಣುಕಾ ಕಾಂಬಳೆ, ಶೋಭಾ ಕಾಡನ್ನವರ, ರಾಜಶ್ರೀ ಬಾಲುನ್ನವರ, ರತ್ನಶ್ರಿ ಗುಡೇರ ಹಾಗೂ ಬುದ್ಧಿ ಮಾಂದ್ಯ ಮಕ್ಕಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ಕಳೆದ ಬಾರಿಗಿಂತ ಹೆಚ್ಚು ಬಹುಮತದಿಂದ ಲಕ್ಷ್ಮೀ ಹೆಬ್ಬಾಳಕರ್ ಆಯ್ಕೆ’
https://pragati.taskdun.com/lakshmi-hebbalkar-will-be-elect-with-more-majority-than-last-time/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ