Politics

*RSS ಎದುರಿಸಲು ನಾವು ಸಿದ್ಧ: ನೀವು ಬ್ರಿಟಿಷರ ಏಜೆಂಟರು ಎಂದು ಗುಡುಗಿದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಆರ್ ಎಸ್.ಎಸ್ ನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಆರ್ ಎಸ್.ಎಸ್ ನ್ನು ಎದುರಿಸಲು ನಾವು ಸಿದ್ಧರಿದ್ದೇವೆ. 1942 ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು ಬಿಜೆಪಿಯವರು. ನೀವು ಬ್ರಿಟಿಷರ ಏಜೆಂಟರು ಎಂದು ಕಿಡಿಕಾರಿದರು.

ಬಿಜೆಪಿ ಆರ್ ಎಸ್.ಎಸ್ ಹೇಳಿದಂತೆ ಮಾಡುತ್ತೆ. ಆರ್ ಎಸ್ .ಎಸ್ ನವರಿಗೆ ನಾವು ಹೆದರುವುದಿಲ್ಲ. ಅವರನ್ನು ಎದುರಿಸಲು ನಾವು ಸಿದ್ದ ಎಂದು ಮುಖ್ಯಮಂತ್ರಿಗಳು ಪ್ರತಿಪಕ್ಷದವರಿಗೆ ಹೇಳಿದರು.

ದಲಿತರ, ಹಿಂದುಳಿದವರ ಏಳಿಗೆ ಸಹಿಸದ ಬಿಜೆಪಿಗೆ ದಲಿತರು ದಲಿತರ ಕಾಲೋನಿಯಲ್ಲೇ ಇರಬೇಕು ಎನ್ನುವ ದುರುದ್ದೇಶವಿದೆ. 1942 ರಲ್ಲಿ ಬ್ರಿಟಿಷರೊಂದಿಗೆ ಸೇರಿಕೊಂಡಿದ್ದವರು ನೀವು. ನೀವು ಬ್ರಿಟಿಷರ ಏಜೆಂಟರು ಎಂದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button