Latest

ಇಂದು ವಿಶ್ವ ಜಲ ದಿನ; ತಿಳಿಯಿರಿ ಹಲವು ಮುಖ್ಯ ಮಾಹಿತಿ 

ಪ್ರಗತಿವಾಹಿನಿ: ಇಂದು ವಿಶ್ವ ಜಲ ದಿನ. ನೀರೇ ಈ ಭೂಮಿಯ ಜೀವಾತ್ಮ. ಪೃಥ್ವಿಯ ಸಕಲ ಜೀವಗಳ ಅಸ್ತಿತ್ವಕ್ಕೆ ನೀರೇ ಕಾರಣ. ನೀರಿನ ಬಳಕೆ ,ಉಳಿಕೆ ಮತ್ತು ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಾರ್ಚ್ 22 ರಂದು, ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುವುದು.

1993ರಲ್ಲಿ ಬ್ರೆಜಿಲ್‌ನ ರಿಯೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಜಲ ಸಂರಕ್ಷಣೆಯ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಯಿತು ಹಾಗೂ ಪ್ರತಿ ವರ್ಷ ಮಾರ್ಚ್‌ 22 ರಂದು ವಿಶ್ವ ಜಲ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.

ಬೆಳೆಯುತ್ತಿರುವ ಜನಸಂಖ್ಯೆ, ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ, ಕೈಗಾರಿಕರಣ, ಅರಣ್ಯನಾಶ ಇನ್ನಿತರ ಕಾರಣಗಳಿಂದ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಬೇಸಿಗೆ ಶುರುವಾಗುವ ಮುಂಚೆಯೇ ನೀರಿನ ಕೊರತೆ ಕಂಡುಬರುತ್ತಿದೆ.

ಪ್ರತಿವರ್ಷ ಒಂದು ಥೀಮ್ ಇರುತ್ತದೆ.2020 ರಲ್ಲಿ, ಥೀಮ್ “ನೀರು ಮತ್ತು ಹವಾಮಾನ ಬದಲಾವಣೆ” ಆಗಿತ್ತು. 2021 ರ ಥೀಮ್ “ನೀರನ್ನು ಮೌಲ್ಯೀಕರಿಸುವುದು” ಮತ್ತು ಸಾರ್ವಜನಿಕ ಅಭಿಯಾನ. . ಈ ವರ್ಷ ‘ಅದೃಶ್ಯ ಅಂತರ್ಜಲವನ್ನು ಸದೃಶ್ಯಗೊಳಿಸುವುದು’ ಎಂಬ ಥೀಮ್‌ (ಪರಿಕಲ್ಪನೆ) ಹೊಂದಲಾಗಿದೆ.

ಮನುಷ್ಯನ ಬಳಕೆಗೆ ಈ ಭೂಮಿಯಲ್ಲಿ ಲಭ್ಯವಿರುವ ಶೇ.1ರಷ್ಟು ನೀರನ್ನು ಸಂರಕ್ಷಿಸಿದರೆ, ಹಿತಮಿತವಾಗಿ ಬಳಸಿಬಿಟ್ಟರೆ ಸಾಕು! ಆದರೆ ಸಿಹಿ ನೀರನ್ನು ಸಂರಕ್ಷಿಸುವಂತೆಯೇ ಸಮುದ್ರ ಸಾಗರಗಳ ನೀರನ್ನೂ ರಕ್ಷಿಸಬೇಕಾದದ್ದು ನಮ್ಮ ಮಹತ್ವದ ಕರ್ತವ್ಯ.

ನೀರಿನ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತಂತೆ ಸುಮಾರು 50 ವರ್ಷಗಳಿಂದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಲೇ ಇವೆ. ನೀರಿನ ಮಾಲಿನ್ಯ, ಕುಗ್ಗುತ್ತಿರುವ ಉಪಯುಕ್ತ ನೀರಿನ ಪ್ರಮಾಣದ ಬಗ್ಗೆ ಜನರನ್ನು ಎಚ್ಚರಿಸಲು ಮತ್ತು ಅರಿವು ಮೂಡಿಸಲು ಶತಪ್ರಯತ್ನ ನಡೆಯುತ್ತಲೇ ಇದೆ. ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕಿದೆ.

ಬೆಳಗಾವಿ ಫೈಲ್ಸ್; ಸಂಜಯ್ ರಾವತ್ ಹೇಳಿಕೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button