Latest

ನಮಗೆ ಜನಬೆಂಬಲ ಸಿಗುವುದು ನೋಡಿ ಬಿಜೆಪಿ, ಜೆಡಿಎಸ್ ಗೆ ಭಯ: ಡಿ.ಕೆ. ಶಿವಕುಮಾರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : “ನಾವು ಯಾವ ಕಡೆ ಹೋದರೂ ನಮಗೆ ಜನರಿಂದ ಸಿಗುತ್ತಿರುವ ಬೆಂಬಲಕ್ಕೆ ಮಾಧ್ಯಮಗಳ ಕ್ಯಾಮೆರಾಗಳೇ ಸಾಕ್ಷಿ. ನಮಗೆ ಸಿಗುತ್ತಿರುವ ಜನ ಬೆಂಬಲ ಕಂಡು ಬಿಜೆಪಿ ಹಾಗೂ ಜೆಡಿಎಸ್ ನವರಿಗೆ ಭೀತಿ ಎದುರಾಗಿದೆ,” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಕೆಪಿಸಿಸಿ ಕಚೇರಿ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಾವು ಚುನಾವಣೆಗೆ ಮುನ್ನ ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡು ಬಂದಿದ್ದೇವೆ. ಇತ್ತೀಚೆಗೆ ಬಿಜೆಪಿ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಘೋಷಣೆ ಮಾಡಿದೆ.  ಈ ಯೋಜನೆಗೆ ಹಣ ನೀಡಿದ್ದು ನಾವು” ಎಂದರು.

“ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ‘ರಾಷ್ಟ್ರೀಯ ಯೋಜನೆ’ ಎಂದು ಘೋಷಿಸಬಹುದಿತ್ತು. ಮೇಕೆದಾಟು ಯೋಜನೆಗೆ ಅನುಮತಿ ನೀಡಬಹುದಿತ್ತು. ಆ ಕೆಲಸವನ್ನು ಬಿಜೆಪಿ ಮಾಡಿಲ್ಲ. ಕಾವೇರಿ ನೀರು ಹಂಚಿಕೆ ವಿಚಾರವಾಗಿ ಭಾನುವಾರವಷ್ಟೇ ತಾಂತ್ರಿಕ ತಂಡದ ಜೊತೆ ಸಭೆ  ನಡೆಸಿದ್ದೇನೆ,” ಎಂದು ಅವರು ಹೇಳಿದರು.

“ನಮ್ಮ ಯಾತ್ರ ಪಂಕ್ಚರ್ ಆಗಲಿದೆ ಎಂದು ಯಡಿಯೂರಪ್ಪ ಸೇರಿದಂತೆ ಹಲವರು ಟೀಕಿಸಿದ್ದಾರೆ. ಆದರೆ ಪಂಕ್ಚರ್ ಆದವರು ಯಾರು ಎಂಬುದನ್ನು ಚುನಾವಣೆಯಲ್ಲಿ ಜನ ನಿರ್ಧರಿಸಲಿದ್ದಾರೆ,” ಎಂದು ಎದುರೇಟು ನೀಡಿದ ಡಿಕೆಶಿ, “ರೈತರ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ,” ಎಂದರು.

Home add -Advt

ಇಂದು ಚಿತ್ರದುರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆ  ನಡೆಸುತ್ತಿರುವುದಾಗಿ ಮಾಹಿತಿ ನೀಡಿದ ಅವರು,  ತಾವು, ಸಲೀಂ ಅಹ್ಮದ್, ಪರಮೇಶ್ವರ್ ಹಾಗೂ ನಾರಾಯಣ ಸ್ವಾಮಿ ಅವರು ಅಲ್ಲಿಗೆ ತೆರಳುತ್ತಿದ್ದು ಉಳಿದ ಮುಖಂಡರೂ ಬರುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆಯಲ್ಲಿ ಯಾತ್ರೆ ಕೈಗೊಳ್ಳಲಾಗುತ್ತಿದ್ದು ವಿಧಾನ ಮಂಡಲದ ಮೂರು ದಿನ ಅಧಿವೇಶನದ ನಿಮಿತ್ತ ವಿರಾಮ ತೆಗೆದುಕೊಂಡು ನಂತರದಲ್ಲಿ ಮಂಡ್ಯ, ಮೈಸೂರು ಜಿಲ್ಲೆಯ ಕ್ಷೇತ್ರಗಳಿಗೆ ಭೇಟಿ ನೀಡುವುದಾಗಿ ಮಾಹಿತಿ ನೀಡಿದರು.

ವಿಮಾನದಲ್ಲಿ ಯೆರ್ರಾಬಿರ್ರಿ ಬಡಿದಾಡಿದ ಮಹಿಳಾಮಣಿಗಳು

https://pragati.taskdun.com/women-beads-fought-on-the-plane/

ಸ್ಪಟಿಕ ಸ್ಪಷ್ಟ ನದಿಯಲ್ಲಿ ಮಹಿಳೆ ದೋಣಿಯಾನ: ಸಖತ್ ವೈರಲ್ ಆದ ಅಪರೂಪದ ವಿಡಿಯೊ

https://pragati.taskdun.com/woman-boating-in-crystal-clear-river-rare-video-goes-viral/

*ಮಹಾಶಿವರಾತ್ರಿ ಮಹೋತ್ಸವ; ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ*

https://pragati.taskdun.com/mahashivaratri-mahotsavanidasosiduradundishwara-sidda-samstana/

Related Articles

Back to top button