Kannada NewsKarnataka NewsLatest

ಯಡಿಯೂರಪ್ಪ, ಅಮಿತ್ ಶಾ ಗುಣಮುಖರಾಗಲು ಪೂಜೆ, ಪ್ರಾರ್ಥನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ  ಕೇಂದ್ರ ಗೃಹ ಮಂತ್ರಿ ಅಮಿತ ಷಾ ಅವರು ಕರೋನಾ ಸೋಂಕಿನಿಂದ ಬೇಗ ಗುಣಮುಖರಾಗಲೆಂದು ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಬೆಳಗಾವಿಯಲ್ಲಿ ಪೂಜೆ ಸಲ್ಲಿಸಿದರು.
ಬೆಳಗಾವಿ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಬೆಜಿಪಿ ಮಹಾನಗರ ಜಿಲ್ಲಾ ಕಾರ್ಯದರ್ಶಿ ಮಹಾಂತೇಶ ವಕ್ಕುಂದ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪೂಜೆ ಸಲ್ಲಿಸಿ,  ಯಡಿಯೂರಪ್ಪ ಹಾಗೂ ಅಮಿತ್ ಶಾ ಬೇಗ ಗುಣಮುಖರಾಗಿ ನಾಡಿನ ಸೇವೆ ಸಲ್ಲಿಸುವಂತಾಗಲಿ ಎಂದು ಪ್ರಾರ್ಥಿಸಿದರು.
ಮಹಾಂತೇಶ ವಕ್ಕುಂದ,  ರುದ್ರಣ್ಣಾ ಚಂದರಗಿ, ಶರದ್ ಪಾಟೀಲ, ರೋಹನ ಜಾಧವ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button