
ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ತೌಕ್ತೆ ಚಂಡಮಾರುತದ ಬಳಿಕ ಇದೀಗ ಯಾಸ್ ಚಂಡಮಾರುತದ ಆರ್ಭಟ ಜೋರಾಗಿದ್ದು, ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಸಮುದ್ರದಲ್ಲಿ ರಕ್ಕಸಗಾತ್ರದ ಅಲೆಗಳು ಆರಂಭವಾಗಿವೆ.
ಪೂರ್ವ ಕರಾವಳಿಯಲ್ಲಿ ಯಾಸ್ ಚಂಡಮಾರುತ ಅಪ್ಪಳಿಸಿದ್ದು, 140ರಿಂದ 155 ಕಿ.ಮೀ ವೇಗದಲ್ಲಿ ಒಡಿಶಾ ಕಡಲ ತೀರಕ್ಕೆ ಚಂಡಮಾರುತ ಅಪ್ಪಳಿಸಿದೆ. ಕೇಂದ್ರಪಾರ ಹಾಗೂ ಪಶ್ಚಿಮ ಬಂಗಾಳದ ದಿಘಾ ಜಿಲ್ಲೆಅಲ್ಲಿ ಭಾರಿ ಮಳೆಯಾಗುತ್ತಿದ್ದು, ತೀರ ಪ್ರದೇಶಕ್ಕೆ ಸಮುದ್ರದ ನೀರು ನುಗ್ಗಿ ಅವಾಂತರಗಳು ಸೃಷ್ಟಿಯಾಗಿವೆ.
ಮುನ್ನೆಚ್ಚರಿಕಾ ಕ್ರಮವಾಗಿ ಬಂಗಾಳದಲ್ಲಿ 11.5 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದರೆ, ಒಡಿಸ್ಸಾದಲ್ಲಿ 2 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.
ಹುಕ್ಕೇರಿಯ ಒಂದೇ ಕುಟುಂಬದ ಮೂವರು ಕೊರೊನಾಗೆ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ