ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ರಾಜ್ಯಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕೊರೊನಾ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ ಗೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರು, ವೈದ್ಯರು, ನರ್ಸ್ ಗಳಿಗೂ ಕೊರೊನಾ ಸೋಂಕು ಹರಡಿದ್ದು, ಇದರ ಬೆನ್ನಲ್ಲೇ ಇದೀಗ ಯಾದಗಿರಿಯಲ್ಲಿ ಆಶಾಕಾರ್ಯಕರ್ತೆಯರಲ್ಲೂ ಕಾಣಿಸಿಕೊಂಡಿದೆ.
ಮಹಾರಾಷ್ಟ್ರ ವಲಸಿಗರಿಂದ ಅಂಗನವಾಡಿ ಸಹಾಯಕಿ ಸೇರಿ ಇಬ್ಬರು ಆಶಾ ಕಾರ್ಯಕರ್ತೆಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಸದ್ಯ ಮೂವರು ಸೋಂಕಿತರನ್ನು ಕೊವೀಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಯಾದಗಿರಿ ನಗರದ ದುಖನವಾಡಿಯ ರೋಗಿ-7896 (34) ಅಂಗನವಾಡಿ ಸಹಾಯಕಿ, ಸುರಪುರನ ದಿವಳಗುಡ್ಡದ ರೋಗಿ-7894(38) ಆಶಾ ಕಾರ್ಯಕರ್ತೆ ಹಾಗೂ ಸುರಪುರ ತಾಲೂಕಿನ ಹೊಸಸಿದ್ದಾಪುರನ ರೋಗಿ-7895(36) ಆಶಾ ಕಾರ್ಯಕರ್ತೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ದುಖನವಾಡಿಯಲ್ಲಿ ಇಬ್ಬರಿಗೆ ಕೊರೊನಾ ಪತ್ತೆಯಾಗಿತ್ತು. ಸೋಂಕಿತರ ಜೊತೆ ಅಂಗನವಾಡಿ ಸಹಾಯಕಿ ಪ್ರಾಥಮಿಕ ಸಂಪರ್ಕ ಹೊಂದಿದ್ದರು. ಮೂವರು ಸೋಂಕಿತರ ಪ್ರಾಥಮಿಕ ಹಾಗೂ ದ್ವೀತಿಯ ಸಂಪರ್ಕ ಹೊಂದಿದವರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ