
ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಗೆ ಬೆಂಕಿ ಬಿದ್ದು, ದಂಪತಿ ಸಜೀವದಹನಗೊಂಡಿರುವ ಹೃದಯವಿದ್ರಾವಕ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರದಲ್ಲಿ ನಡೆದಿದೆ.
ರಾಗಯ್ಯ ಹಾಗೂ ಶಿಲ್ಪಾ ಮೃತ ದಂಪತಿ. ರಾಗಯ್ಯ ಮನೆಯಲ್ಲಿಯೇ ಐರನ್ ಅಂಗಡಿ ನಡೆಸುತ್ತಿದ್ದರು. ರಾಗಯ್ಯ ಬಾತ್ ರೂಂ ಗೆ ತೆರಳಿದ್ದ ವೇಳೆ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಏಕಾಏಕಿ ಬೆಂಕಿ ಇಡೀ ಮನೆ ವ್ಯಾಪಿಸಿದೆ.
ಮನೆಯಿಂದ ಹೊರ ಬರಲು ದಂಪತಿಗಳಿಬ್ಬರೂ ಪರದಾಡಿದ್ದಾರೆ. ಆದರೂ ಸಾಧ್ಯವಾಗಿಲ್ಲ. ಮನೆಯೊಳಗೇ ಇಬ್ಬರೂ ಸಜೀವದಹನವಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ