
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಬೆಳಗಾವಿಯಿಂದ ಗುಳೆದಗುಡ್ಡಕ್ಕೆ ಸಂಚರಿಸುವ ಮಾರ್ಗ ಮಧ್ಯದಲ್ಲಿ ಗುಳೆದಗುಡ್ಡಕ್ಕೆ ಕಾರ್ಯಕ್ರಮಕ್ಕೆ ಬಂದಿದ್ದ ಮೈಸೂರು ರಾಜ ಮನೆತನದ ಮಹಾರಾಜ ಯದುವೀರ ಒಡೆಯರ್ ಅವರು ಶ್ರೀಗಳ ಆಶೀರ್ವಾದ ಪಡೆದು ಯೋಗ ಕ್ಷೇಮ ವಿಚಾರಿಸಿದರು.

ಈ ಸಂದರ್ಭದಲ್ಲಿ ಶ್ರೀಗಳು ರಚಿಸಿದ ವಚನ ಕಾರಂಜಿ, ಅಭಿನಂದನ ಗ್ರಂಥ, ಸಮನ್ವಯ ಶಿಖರ, ದೇವಿ ಪಾರಾಯಣ ಹಾಗೂ ಬೆಳಗಾವಿ ಕುಂದಾ ನೀಡಿ ಶ್ರೀಗಳು ಯದುವೀರ ಒಡೆಯರ್ ಅವರನ್ನು ಗೌರವಿಸಿದರು. ಈ ವೇಳೆ ಯದುವೀರ ಒಡೆಯರ್ ಅವರು ಹುಕ್ಕೇರಿ ಹಿರೇಮಠಕ್ಕೆ ಶೀಘ್ರವೇ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು.
ಶ್ರೀಗಳು ಮಾತನಾಡಿ, “ರಾಜರು ಹೇಗಿದ್ದರು ಎಂದು ನಮ್ಮ ಜನ ನೋಡುತ್ತಿರುತ್ತಾರೆ. ಆದರೆ ಮಹಾರಾಜರು ಇಷ್ಟು ಸರಳವಾಗಿ ಇರುತ್ತಾರೆ ಎನ್ನುವುದು ಯದುವೀರ ಒಡೆಯರ್ ಅವರನ್ನು ನೋಡಿ ತಿಳಿಯಬಹದು” ಎಂದರಲ್ಲದೆ ಮಹಾರಾಜರಿಗೆ ಮಂಗಲಾಶೀರ್ವಾದ ಮಾಡಿದರು.
ಕರ್ನಾಟಕ ರಾಜ್ಯ ಬಿಸಿಯೂಟ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಸದಸ್ಯರಾದ ಶ್ರೀಧರ ಶೆಟ್ಟರ್, ಕಾರ್ಯದರ್ಶಿ ಕೆ.ಭೀಮಾ, ಸದಸ್ಯರಾದ ಅಪ್ಪಾಜಿ ಗೌಡರ, ರವೀಂದ್ರ ಹಾಗೂ ಎಂ.ಕೆ.ಹುಬ್ಬಳ್ಳಿಯ ಸಮರ್ಥ ಸೇವಾ ಸಂಸ್ಥೆಯ ಮಂಜುನಾಥ ಅಳವಣೆ, ಕೆಎಸ್ ಎಂಎಫ್ ಖಜಾಂಚಿ ಕಲ್ಲಪ್ಪ ಬೋರಣ್ಣವರ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ