Latest

*ಚಂಡಮಾರುತದ ಅಟ್ಟಹಾಸಕ್ಕೆ 81 ಜನರು ಸಾವು; 100ಕ್ಕೂ ಹೆಚ್ಚುಜನರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ; ಮ್ಯಾನ್ಮಾರ್: ಮೋಕಾ ಚಂಡಮಾರುತದ ಅಬ್ಬರಕ್ಕೆ 81 ಜನರು ಮೃತಪಟ್ಟಿರುವ ಘಟನೆ ಮ್ಯಾನ್ಮಾರ್ ನಲ್ಲಿ ನಡೆದಿದೆ.

ರಾಝೈನ್ ರಾಜ್ಯದ ರಾಜಧಾನಿ ಸಿಟ್ವೆಯ ಬಹುತೇಕ ಭಾಗಗಳು ಚಂಡಮಾರುತ ಪರಿಣಾಮ ಪ್ರವಾಹಕ್ಕೆ ಒಳಗಾಗಿವೆ. ಗಂಟೆಗೆ 130 ಮೈಲುಗಳಷ್ಟು ವೇಗವಾಗಿ ಗಾಳಿ ಬೀಸಿತ್ತು. ಬುಮಾ ಮತ್ತು ಸಮೀಪದ ಖೌಂಗ್ ಡೋಕ್ ಗ್ರಾಮಗಳಲ್ಲಿ 46 ಜನರು ಸಾವನ್ನಪ್ಪಿದ್ದಾರೆ.

Home add -Advt

ರಾಥೆಡಾಂಗ್ ಟೌನ್ ಶಿಪ್ ನ ಹಳ್ಳಿಯಲ್ಲಿ ಧಾರ್ಮಿಕ ಕಟ್ಟಡವೊಂದು ಕುಸಿದು 13 ಜನರು ಸಾವನ್ನಪ್ಪಿದ್ದಾರೆ. ಮೋಕಾ ಚಂಡಮಾರುತ ಮ್ಯಾನ್ಮಾರ್ ನಲ್ಲಿ ಈವರೆಗೆ 81 ಜನರನ್ನು ಬಲಿ ಪಡೆದಿದೆ.

100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

https://pragati.taskdun.com/cm-basavaraj-bommaiv-somannadr-k-sudhakarmeet/


Related Articles

Back to top button