ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಯರಗಟ್ಟಿ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ 

ಪ್ರಗತಿವಾಹಿನಿ ಸುದ್ದಿ, ಧಾರವಾಡ 
ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಯುವತಿಯೋರ್ವಳು ಡೆತ್ ನೋಟ್ ಬರೆದಿಟ್ಟು, ನೇಣುಹಾಕಿಕೊಂಡ ಘಟನೆ ಧಾರವಾಡದ ಸಪ್ತಾಪುರದಲ್ಲಿ ನಡೆದಿದೆ.
ಈ ಘಟನೆ ಧಾರವಾಡ ಜನರಲ್ಲಿ ಅಷ್ಟೇ ಅಲ್ಲದೆ ಇಲ್ಲಿ ಓದುವ ವಿದ್ಯಾರ್ಥಿಗಳ ಪಾಲಕರ ಮನದಲ್ಲಿ  ಆತಂಕ ಮೂಡಿಸಿದೆ.
ಧಾರವಾಡದ ಸಪ್ತಾಪುರದ ಕೋಚಿಂಗ್ ಸೆಂಟರ್​ನಲ್ಲಿ ಕೋಚಿಂಗ್ ಪಡೆಯುತ್ತಿದ್ದ ವಿದ್ಯಾರ್ಥಿನಿಯೋರ್ವಳು ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬಾಗಲಕೋಟೆ ಜಿಲ್ಲೆಯ ಯರಗಟ್ಟಿ ಗ್ರಾಮದ ವಿದ್ಯಾರ್ಥಿನಿ ಗೀತಾ ಹೆಗ್ಗನ್ನವರ (22) ಸಪ್ತಾಪುರದಲ್ಲಿರುವ ಪಿಜಿಯಲ್ಲಿ ವಾಸವಾಗಿದ್ದು, ಕೋಚಿಂಗ್ ಸೆಂಟರ್​​ನಲ್ಲಿ  ಎರಡು ತಿಂಗಳಿಂದ ತರಬೇತಿ ಪಡೆಯುತ್ತಿದ್ದರು.‌ ಈಗ ಇದ್ದಕ್ಕಿದ್ದ ಹಾಗೆ ಡೆತ್ ನೋಟ್ ಬರೆದು ಸಾವನಪ್ಪಿದ್ದಾರೆ. ಗುರುವಾರ ಬೆಳಗ್ಗೆ ಪಿಜಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಶ್ವಿನಿಯ ಶವಪತ್ತೆಯಾಗಿದೆ.
ಘಟನಾ ಸ್ಥಳಕ್ಕೆ ಉಪನಗರ ಪೋಲಿಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ಏನಿದೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button