Belagavi NewsBelgaum NewsKannada NewsKarnataka NewsLatestPolitics

*ಹೊಂದಾಣಿಕೆ ರಾಜಕಾರಣ ಬೊಮ್ಮಾಯಿಗೆ ವೇದಿಕೆಯಲ್ಲೇ ಯತ್ನಾಳ್ ಟಾಂಗ್* *ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ*

ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲೆ ಮತ್ತು ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ


ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಚಪ್ಪಲಿಯಲ್ಲಿ ಹೊಡೆದಾಡಿಕೊಳ್ತಾರೆ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲೆ ಮತ್ತು ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಸಕ ಯತ್ನಾಳ್, ಈ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ಆಕ್ಸಿಡೆಂಟ್ ಆಗುವುದು ಖಚಿತ, ಲೋಕಸಭೆ ಚುನಾವಣೆ ಆದಮೇಲೆ ಇಲ್ಲವೇ ಮೊದಲೇ ಅಪಘಾತವಾಗಲಿದೆ. ಕಾಂಗ್ರೆಸ್ ಸರ್ಕಾರ 5 ವರ್ಷ ನಡೆಯುವುದೇ ಇಲ್ಲ. ಸಿದ್ದರಾಮಯ್ಯ ಬಿಡಲ್ಲ, ಡಿ.ಕೆ.ಶಿವಕುಮಾರ್ ಕೂಡ ಬಿಡೋದಿಲ್ಲ, ಇಬ್ಬರೂ ಚಪ್ಪಲಿಯಲ್ಲಿ ಹೊಡೆದಾಡಿಕೊಳ್ತಾರೆ ಎಂದು ವಿವಾದ ಸೃಷ್ಟಿಸಿದ್ದಾರೆ.

ಇದೇ ವೇದೇ ವೇಳೆ ಬಿಜೆಪಿ ನಾಯಕರಿಂದಲೇ ಹೊಂದಾಣಿಕೆ ರಾಜಕಾರಣ ಎಂಬ ಬಗ್ಗೆ ಪರೋಕ್ಷವಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿಗೆ ಟಾಂಗ್ ನೀಡಿದ ಯತ್ನಾಳ್, ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲು ನಾವ್ಯಾಕೆ ಓಡಾಡಬೇಕು ಎಂದು ಪ್ರಶ್ನಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರ ಮನೆಗೆ ಬೇಟಿ ನೀಡಿದ್ದಾರೆ. ಸೌಜನ್ಯಕ್ಕೆ ಇಬ್ಬರ ಮನೆಗೆ ಭೇಟಿ ನೀಡ್ತಿಲ್ಲ. ಸೋನಿಯಾ ಗಾಂಧಿಯವರಿಗೆ ಗೊತ್ತಾಗಲಿ ಎಂದು ಭೇಟಿ ಕೊಡುತ್ತಿದ್ದಾರೆ. ನಾವ್ಯಾಕೆ ಡಿಕೆಶಿ ಸಿಎಂ ಮಾಡಲು ಓಡಾಡಬೇಕು? ಮೊನ್ನೆ ಸಿಎಂ ಸಿದ್ದರಾಮಯ್ಯ ಏನಂದ್ರು? ಅಧಿಕಾರದಲಿದ್ದಾಗ ನಾನು ವಿಪಕ್ಷದವರ ಮನೆಗೆ ಹೋಗಲ್ಲ ಅಂದ್ರು. ನಾವು ಕೂಡ ಅದೇ ರೀತಿ ಇರಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೂತಿನೂ ನೋಡಲ್ಲ, ಮನೆಗೂ ಭೇಟಿ ಕೊಡಲ್ಲ ಎಂದು ಹೇಲಬೇಕು. ಅಂದಾಗ ಮಾತ್ರ ನಮ್ಮ ಪಾರ್ಟಿ ಉಳಿಯಲು ಸಾಧ್ಯ ಎಂದು ಟಾಂಗ್ ನೀಡಿದ್ದಾರೆ.

ಬೆಳಗಾವಿ ನಗರದ ಗಾಂಧಿ ಭವನದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು 9 ವರ್ಷ ಪೂರ್ಣಗೊಳಿಸಿ 10ನೇ ವರ್ಷಕ್ಕೆ ಪಾಧಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಬೆಳಗಾವಿ ಮಹಾನಗರ ಜಿಲ್ಲೆ ಮತ್ತು ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯು ಜರುಗಿತು.


ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಸರ್ಕಾರವು 9 ವರ್ಷಗಳ ಕಾಲ ಮಾಡಿರುವ ಜನಪರ ಯೋಜನೆಗಳನ್ನು ಹಾಗೂ ಅವರ ಅಭಿವೃದ್ದಿ ಕಾಮಗಾರಿಗಳನ್ನು ಮನೆಮನಕ್ಕೆ ತಲುಪಿಸುವ ಮತ್ತು ಕೆಂದ್ರ ಸರ್ಕಾರದ ಯಶಸ್ವಿ ಯೋಜನೆಗಳಾದ ಬೇಟಿ ಬಚಾವೋ, ಬೇಟಿ ಪಡಾವೋ, ಹೆಣ್ಣು ಮಕ್ಕಳ ರಕ್ಷಣೆ, ಜನ್-ದನ್ ಯೋಜನೆ, ಹರ ಘರ ಬಿಜಲಿ ಯೋಜನೆ, ಸಂಸದರರ ಆದರ್ಶ ಗ್ರಾಮ ಯೋಜನೆ, ಭಾರತದ ಉದ್ಯಮಶೀಲತಾ ಶಕ್ತಿಯನ್ನು ಹೊರಹೊಮ್ಮಿಸುವುದು, ನಮಾಮಿ ಗಂಗೆ, ಭಾರತದ ಅಭಿವೃಧ್ದಿ ಪಲಪಡಿಸುವಿಕೆ, ಭಾರತದ ಆರ್ಥಿಕತೆಗೆ ವೇಗ ಹೆಚ್ಚಿಸುವುದು, ಸಮೃದ್ದ ಭಾರತಕ್ಕಾಗಿ ರೈತರ ಸಬಲೀಕರಣ, ಹಿಂದೆಂದೂ ಕಾಣದ ಪಾರದರ್ಶಕತೆಯತ್ತ ಮತ್ತು ಭವ್ಯ ಭವಿಷ್ಯದತ್ತ ಭಾರತದ ಜೋಡಣೆ, ಎಲ್ಲರಿಗೂ ಸೂರು ಯೋಜನೆ, ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಜೊತೆಗೆ ವಿವಿಧ ರಾಜ್ಯಗಳ ಸಬಲೀಕರಣ, ಸ್ವಚ್ಛ ಭಾರತದೆಡೆಗೆ ಒಯ್ಯುವುದು ಸೇರಿದಂತೆ ಹಲವಾರು ಜನಪರ ಯೋಜನೆಗಳ ಯಶಸ್ಸು ಹಾಗೂ ಮುಂಬರುವ ದಿನಗಳಲ್ಲಿ ದೇಶದ ಭವಿಷ್ಯಕ್ಕೆ ನರೇಂದ್ರ ಮೋದಿ ಅವರ ಚಿಂತನ ಕುರಿತು ಚರ್ಚೆ ನಡೆಸಲಾಯಿತು.


ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಹಿರಿಯರು ಮತ್ತು ಮಾಜಿ ರಾಜ್ಯ ಸಭಾ ಸದಸ್ಯರಾದ ಡಾ. ಪ್ರಭಾಕರ ಕೋರೆ, ಸಂಸದರರಾದ ಮಂಗಳಾ ಸುರೇಶ ಅಂಗಡಿ, ರಮೇಶ ಜಿಗಜಿಣಗಿ, ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವರುಗಳಾದ ಬೈರತಿ ಬಸವರಾಜ, ಮುರಗೇಶ ನಿರಾಣಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಅನಿಲ ಬೆನಕೆ, ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರು ಮತ್ತು ಮಾಜಿ ಶಾಸಕರಾದ ಸಂಜಯ ಪಾಟೀಲ, ರಾಜ್ಯ ಸಭಾ ಸದಸ್ಯರಾದ ಈರಣ್ಣಾ ಕಡಾಡಿ, ಶಾಸಕರುಗಳಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ವಿಠ್ಠಲ ಹಲಗೇಕರ, ಮಾಜಿ ಶಾಸಕರಾದ ಮಹಾಂತೇಶ ದೊಡಗೌಡರ, ಅರವಿಂದ ಪಾಟೀಲ, ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರಾದ ಶೋಭಾ ಸೋಮಾನಾಚೆ, ಉಪಮಹಾಪೌರ ರೇಷ್ಮಾ ಪಾಟೀಲ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಉಜ್ವಲಾ ಬಡವಾನಾಚೆ, ರಾಜ್ಯ ವಕ್ತಾರರಾದ ಎಮ್. ಬಿ. ಜಿರಲಿ, ಚಂದ್ರಶೇಖರ ಕವಟಗಿ, ಎ. ಎಸ್. ಪಾಟೀಲ ಹಾಗೂ ಸಾವಿರಾರು ಸಂಖ್ಯೆಯ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button