Kannada NewsKarnataka NewsLatestPolitics

*ಬಿಜೆಪಿಯಲ್ಲಿ ದೊಡ್ಡ ಕ್ರಾಂತಿಯಾಗಲಿದೆ; ಶಾಸಕ ಯತ್ನಾಳ್ ಭವಿಷ್ಯ*

ಪ್ರಗತಿವಾಹಿನಿ ಸುದ್ದಿ; ವಿಜಯಪುರ: ಲೋಕಸಭಾ ಚುನಾವಣೆ ಬಳಿಕ ಬಿಜೆಪಿಯಲ್ಲಿ ದೊಡ್ಡ ಕ್ರಾಂತಿಯಾಗಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಚುನಾವಣೆ ಬಳಿಕ ವಂಶವಾದ, ಭ್ರಷ್ಟಾಚಾರ, ಹೊಂದಾಣಿಕೆ ರಾಜಕೀಯ ಖತಂ ಆಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

Home add -Advt

ನರೇಂದ್ರ ಮೋದಿಯವರು 2024ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಭ್ರಷ್ಟಾಚಾರ, ಹೊಂದಾಣಿಕೆ ರಾಜಕೀಯ, ವಂಶವಾದ ಇದೆಲ್ಲವೂ ಮುಗಿಯಲಿದೆ. ಅಲ್ಲಿಯವರೆಗೂ ಸುಮ್ಮನೇ ಜಗ್ಗುತ್ತಿರುತ್ತಾರೆ ಎಂದಿದ್ದಾರೆ.

ಇದೇ ವೇಳೆ ನಾನು ಯಾವುದೇ ಹಗಲುಗನಸು ಕಾಣಲ್ಲ. ಸ್ಥಾನಮಾನಕ್ಕೂ ಅಪೇಕ್ಷೆ ಪಡಲ್ಲ, ಕೊಡಬಹುದು ಅಥವಾ ಕೊಡದಿರಬಹುದು. ಅವರೇ ಲೋಕಸಭೆ ಚುನಾವಣೆ ಸಂಬಾಳಿಸಿಕೊಂಡು ಹೋಗಬಹುದು ಎಂದು ಹೇಳಿದ್ದಾರೆ.


Related Articles

Back to top button