Politics

*ವೀರಶೈವ ಲಿಂಗಾಯಿತರೂ ಈಗ ಯಡಿಯೂರಪ್ಪ ಜೊತೆಗಿಲ್ಲ: ಶಾಸಕ ಯತ್ನಾಳ್ ಟಾಂಗ್*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿರುವ ನಡುವೆಯೇ ಶಾಸಕ ಯತ್ನಾಳ್ ಟೀಂ ದೆಹಲಿಯಲ್ಲಿ ಬೀಡುಬಿಟ್ಟಿದ್ದು, ರಾಷ್ಟ್ರಾಧ್ಯಕ್ಷರ ಭೇಟಿ ಬಳಿಕ ಹಲವು ವರಿಷ್ಠರ ಭೇಟಿಯಾಗಿ ಚರ್ಚೆ ನಡೆಸಿದೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ವೀರಶೈವ ಲಿಂಗಾಯಿತರೂ ಈಗ ಯಡಿಯೂರಪ್ಪ ಜೊತೆಗಿಲ್ಲ. ಅದು ಮುಗಿದುಹೋದ ಅಧ್ಯಾಯ. ನನಗೆ ಯಡಿಯೂರಪ್ಪ ಮೇಲೆ ಬಹಳ ಗೌರವ ಇತ್ತು. ಆದರೆ ತನನ್ನೇ ಜೈಲಿಗೆ ಕಳುಹಿಸಿದ ಮಗನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ ಮೇಲೆ ಗೌರವವೆಲ್ಲ ಕೊಚ್ಚಿಕೊಂಡು ಹೋಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.

ಕೆಲ ಸ್ವಾಮೀಜಿಗಳು ದುಡ್ದು ಕೊಟ್ಟವರ ಪರ ಮಾತನಾಡುತ್ತಾರೆ. ಒಂದು ಲಕ್ಷ ನೀಡಿದರೆ ನಿಮ್ಮ ಪರವಾಗಿ ಹೇಳಿಕೆ ನೀಡುವ ಸ್ವಾಮೀಜಿಗಳೂ ಇದ್ದಾರೆ ಎಂದು ಕಿಡಿಕಾರಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button