Belagavi NewsBelgaum NewsElection NewsKannada NewsKarnataka NewsPolitics

ಬಿಜೆಪಿಗೆ, ಶೆಟ್ಟರ್ ಗೆ ಮುಜುಗರ ತಂದ ಯತ್ನಾಳ್ “ಗಂಡಸರಿಲ್ವಾ” ಭಾಷಣ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಜಗದೀಶ ಶೆಟ್ಟರ್ ಪಕ್ಕದಲ್ಲೇ ನಿಂತುಕೊಂಡು ಮಾಡಿದ ಭಾಷಣವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಬಿಜೆಪಿಗೆ ಹಾಗೂ ಜಗದೀಶ್ ಶೆಟ್ಟರ್ ಗೆ ತೀವ್ರ ಮುಜುಗರ ತರುತ್ತಿದೆ.

ಬಾಗಲಕೋಟೆಯಲ್ಲಿ ಕಾಂಗ್ರೆಸ್ ನವರು ಹೊರಗಿನ ಜಿಲ್ಲೆಯವರಿಗೆ ಟಿಕೆಟ್ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಟಿಕೆಟ್ ಕೊಡಲು ಕಾಂಗ್ರೆಸ್ ನಲ್ಲಿ ಯಾರೂ ಗಂಡಸರು, ಹೆಣ್ಮಕ್ಕಳು ಅದಾರೋ ಇಲ್ವೋ ಎಂದು ಯತ್ನಾಳ್ ರೋಶಾವೇಷದ ಭಾಷಣ ಮಾಡಿದ್ದಾರೆ.

ಯತ್ನಾಳ ಭಾಷಣಕ್ಕೆ ಜನರು ಜಪ್ಪಾಳೆಯ ಸುರಿಮಳೆಗೈದಿದ್ದಾರೆ. ಶಿಳ್ಳೆ ಹೊಡೆದಿದ್ದಾರೆ. ಆದರೆ ಯತ್ನಾಳ್ ಪಕ್ಕದಲ್ಲೇ ನಿಂತಿದ್ದ ಬೆಳಗಾವಿ ಲೋಕಸಭಾ ಅಭ್ಯರ್ಥಿ ಜಗದೀಶ ಶೆಟ್ಟರ್ ತೀವ್ರ ಮುಜುಗರ ಅನುಭವಿಸಿದರು. ಹುಬ್ಬಳ್ಳಿಯಿಂದ ಬಂದು ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶೆಟ್ಟರ್ ತಮ್ಮ ಸ್ಪರ್ಧೆಯನ್ನು ಪ್ರತಿ ನತ್ಯ ಸಮರ್ಥಿಸಿಕೊಳ್ಳುತ್ತಿದ್ದರು.

ಇದೀಗ ಯತ್ನಾಳ್ ಮಾಡಿದ ಭಾಷಣದಿಂದಾಗಿ ಶೆಟ್ಟರ್ ಬಾಯಿ ಬಂದ್ ಆಗಿದೆ. ಬಿಜೆಪಿ ಕೂಡ ತೀವ್ರ ಮುಜುಗರ ಅನುಭವಿಸುವಂತಾಗಿದೆ. ಹೊರಗಿನವರಿಗೆ ಟಿಕೆಟ್ ಕೊಡಲು ಬೆಳಗಾವಿ ಬಿಜೆಪಿಯಲ್ಲಿ ಯಾರೂ ಗಂಡಸರು, ಹೆಣ್ಮಕ್ಕಳು ಅದಾರೋ ಇಲ್ವೋ ಎನ್ನುವ ಪ್ರಶ್ನೆಗೆ ಬಿಜೆಪಿ ಮತ್ತು ಶೆಟ್ಟರ್ ಯಾವ ರೀತಿಯಲ್ಲಿ ಉತ್ತರಿಸುತ್ತಾರೆ ಕಾದು ನೋಡಬೇಕಿದೆ.

Home add -Advt

https://www.facebook.com/share/v/h9sp3dNp1gT2XbV5/?mibextid=oFDknk

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button